ಸ್ಪೇನ್ ತಂಡದಲ್ಲಿ ಕೋಸ್ಟಾಗೆ ಸ್ಥಾನ
ಮುಂಬರುವ ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ಗಾಗಿ ಹಾಲಿ ಚಾಂಪಿಯನ್ ಸ್ಪೇನ್ ತಂಡವನ್ನು ಪ್ರಕಟಿಸಲಾಗಿದೆ.
ಮ್ಯಾಡ್ರಿಡ್: ಮುಂಬರುವ ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ಗಾಗಿ ಹಾಲಿ ಚಾಂಪಿಯನ್ ಸ್ಪೇನ್ ತಂಡವನ್ನು ಪ್ರಕಟಿಸಲಾಗಿದೆ.
ಅಟ್ಲೆಟಿಕೊ ಮ್ಯಾಡ್ರಿಡ್‌ನ ಮುನ್ಪಡೆ ಆಟಗಾರ ಡೀಗೊ ಕೋಸ್ಟಾ, 23 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಲ ತೊಡೆಯ ಸ್ನಾಯುಸೆಳೆತದಿಂದ ಬಳಲುತ್ತಿರುವ ಕೋಸ್ಟಾ, ಹಾಲಿ ಚಾಂಪಿಯನ್ ಸ್ಪೇನ್ ತಂಡವನ್ನು ಮುನ್ನಡೆಸಲು ಫಿಟ್ ಆಗಲಿದ್ದಾರೆ ಎಂದು ಕೋಚ್ ವಿಸೆಂಟೆ ಡೆಲ್ ಬಾಸ್ಕೊ ತಿಳಿಸಿದ್ದಾರೆ.
ಬ್ರೆಜಿಲ್‌ನಲ್ಲಿ ಜನಿಸಿ ನಂತರ ಸ್ಪೇನ್ ರಾಷ್ಟ್ರೀಯತೆಯನ್ನು ಪಡೆದಿರುವ ಕೋಸ್ಟಾ ಅವರು ಎಂದಿನ ಲಯಕ್ಕೆ ಮರಳಿದ್ದಾರೆ ಎಂಬ ವಿಶ್ವಾಸವನ್ನು ಹೊಂದಲಾಗಿದೆ. ಫರ್ನಾಂಡೊ ಟೊರೆಸ್ ಮತ್ತು ಡೇವಿಡ್ ವಿಲ್ಲಾ ಕೂಡ ತಂಡದಲ್ಲಿದ್ದಾರೆ. ಸ್ಪೇನ್ ತಂಡ 'ಬಿ' ಗುಂಪಿನಲ್ಲಿ ಸ್ಥಾನ ಹೊಂದಿದ್ದು, ಜೂನ್ 13ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಹಾಲೆಂಡ್ ತಂಡವನ್ನು ಎದುರಿಸಲಿದೆ. ಕಳೆದ 2010ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲೇ ಮುಖಾಮುಖಿಯಾಗಿದ್ದ ಈ ತಂಡಗಳ ಪೈಕಿ, ಸ್ಪೇನ್ ಅಂತಿಮವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ತಂಡದಲ್ಲಿರುವ 23 ಆಟಗಾರರ ಪೈಕಿ ಕಳೆದ ಬಾರಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದ 16 ಆಟಗಾರರು ಈ ಸಲವೂ ಸ್ಥಾನ ಪಡೆದಿದ್ದಾರೆ.
ಸ್ಪೇನ್ ವಿಶ್ವಕಪ್ ತಂಡ: ಗೋಲ್ ಕೀಪರ್- ಐಕರ್ ಕ್ಯಾಸಿಲಾಸ್, ಪೇಪೆ ರೈನಾ, ಡೇವಿಡಿ ಡಿ ಜಿಯೆ. ರಕ್ಷಣೆ- ಸೆಸಾರ್ ಆಪಿಲಿಕ್ವೆಟಾ, ಸೆರ್ಗಿಯೊ ರಾಮೋಸ್, ಗೆರಾರ್ಡ್ ಪಿಕ್, ಜಾವಿ ಮಾರ್ಟಿನೆಜ್, ರಾಲ್ ಅಲ್ಬಿಯೊಲ್, ಜಾರ್ಡಿ ಅಲ್ಬಾ, ಜುವಾನ್‌ಫ್ರಾನ್ ಟೊರೆಸ್. ಸಂಪರ್ಕ- ಜಾವಿ ಹೆರ್ನಾಂಡೆಜ್, ಸೆರ್ಗಿಯೊ ಬಾಸ್ಕೆಟ್ಸ್, ಜಾಬಿ ಅಲೋನ್ಸೊ, ಸ್ಯಾಂಟಿ ಕಾಜೊರ್ಲಾ, ಸೆಸ್ ಫ್ಯಾಬ್ರಿಗಾಸ್, ಡೇವಿಡ್ ವಿಲ್ಲಾ, ಆ್ಯಂಡ್ರಿಯಾಸ್ ಇನಿಯೆಸ್ಟಾ, ಕೋಕ್, ಜುವಾನ್ ಮಾಟಾ. ಮುನ್ಪಡೆ- ಪೆಡ್ರೊ ರೋಡ್ರಿಗೇಜ್, ಫರ್ನಾಂಡೊ ಟೊರೆಸ್, ಡೇವಿಡ್ ವಿಲ್ಲಾ, ಡೀಗೊ ಕೋಸ್ಟಾ.