ಕ್ರೀಡೆ

ಬೃಹತ್ ಮೊತ್ತದತ್ತ ಭಾರತ ವನಿತೆಯರು

ಮೈಸೂರು: ಆರಂಭಿಕ ಆಟಗಾರ್ತಿ ಎಂ.ಡಿ.ತಿರುಶ್‌ಕಾಮಿನಿ ಮತ್ತು ಪೂನಮ್ ರೌತ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಭಾರತ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಿಟ್ಟ ಹೆಜ್ಜೆ ಹಾಕಿದ್ದಾರೆ.

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್‌ಗೆದ್ದ ಭಾರತ, ಬ್ಯಾಟಿಂಗ್ ಆಯ್ದುಕೊಂಡಿತು. ನಂತರ ದಿನದಾಟ ಮುಕ್ತಾಯಕ್ಕೆ ಕೇವಲ ಒಂದು ವಿಕೆಟ್ ನಷ್ಟಕ್ಕೆ 211ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಆರಂಭಿಕ ಆಘಾತ ಅನುಭವಿಸಿದರೂ ಸಹ, ಎರಡನೇ ವಿಕೆಟ್‌ಗೆ ಜೊತೆಯಾದ ತಿರುಶ್‌ಕಾಮಿನಿ ಮತ್ತು ಪೂನಮ್ ರೌತ್ ಅವರ ಜೋಡಿ ಮುರಿಯದ 202 ರನ್‌ಗಳ ಜೊತೆಯಾಟ ನೀಡಿತು.

ಭಾರತ ತಂಡ 8 ವಿಕೆಟ್ ಗಳಿಸಿದ್ದಾಗ ಸ್ಮೃತಿ ಮಂಧಾನ (8) ಅವರು ಕ್ಲಿಯೊ ಟ್ರೈಯಾನ್ ಬೌಲಿಂಗ್‌ನಲ್ಲಿ ಸುನೆಟ್ ಲೌಬ್ಸರ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಎರಡು ಬೌಂಡರಿಯೊಂದಿಗೆ ಭರ್ಜರಿ ಆಟ ಆರಂಭಿಸಿದ ಸ್ಮೃತಿಯನ್ನು ಆಫ್ರಿಕಾ ಬೌಲರ್‌ಗಳು ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾದರು. ಬಳಿಕ ಕ್ರೀಸ್‌ಗೆ ಬಂದ ಪೂನ್ ರೌತ್ ಮತ್ತು ಕಾಮಿನಿ ಜೋಡಿಯನ್ನು ಮುರಿಯಲು ಹರಿಣಗಳಿಗೆ ಸಾಧ್ಯವಾಗಲಿಲ್ಲ.

ದಿನದ ಅಂತ್ಯದವರೆಗೂ ಮನಬಂದಂತೆ ಆಡಿದ ಈ ಜೋಡಿ ದ್ವಿಶತಕದ ಜತೆಯಾಟವಾಡಿತು. ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಅತ್ಯುತ್ತಮವಾಗಿ ಇನ್ನಿಂಗ್ಸ್ ಕಟ್ಟಿತು. ಆರಂಭಿಕ ಆಟಗಾರ್ತಿ ಎಂ.ಡಿ.ತಿರುಶ್‌ಕಾಮಿನಿ ಅವರು 305 ಬಾಲ್‌ಗೆ 13 ಬೌಂಡರಿಯೊಂದಿಗೆ ಅಜೇಯ 100 ರನ್ ಮತ್ತು ದ್ವಿತೀಯ ವಿಕೆಟ್‌ಗೆ ಕ್ರೀಡಾಂಗಣ ಪ್ರವೇಶಿಸಿದ ಪೂನಮ್ ರೌತ್ 297 ಎಸೆತ ಎದುರಿಸಿ 13 ಬೌಂಡರಿಯೊಂದಿಗೆ ಅಜೇಯ 100 ರನ್ ಗಳಿಸಿದರು.

ಸ್ಕೋರ್‌ವಿವರ
ಭಾರತ ಮೊದಲ ಇನಿಂಗ್ಸ್ 102
ಓವರುಗಳಲ್ಲಿ 1 ವಿಕೆಟ್‌ಗೆ 211

ತಿರುಶ್‌ಕಾಮಿನಿ ಅಜೇಯ 100, ಸ್ಮೃತಿ ಮಂಧಾನ ಸಿ ಸುನೆಟ್
ಲೌಬ್ಲರ್ ಬಿ ಕ್ಲಿಯೊ ಟ್ರೈಯಾನ್ 8, ಪೂನಮ್ ರೌತ್ ಅಜೇಯ 100, ಇತರೆ-3 (2ಬೈ, 1 ನೋಬಾಲ್) ವಿಕೆಟ್ ಪತನ- 8-1

ಬೌಲಿಂಗ್ ವಿವರ: ಮರಿಜಾನ್ ಕಪ್ 11-6-7-0, ಕ್ಲಿಯೊ ಟ್ರೈಯಾನ್ 10-3023-1, ಮರ್ಸಿಯಾ ಲೆಟ್ರೋಲೋ 19-10-29-0, ಸುನೆಟ್ ಲೌಬ್ಸರ್ 20-5-49-0, ಡೇನ್ ವ್ಯಾನ್ 30-8-54-0, ಯೊಲಾನಿ ಫೋರಿಯಾ 11-0-42-0, ಮಿಗನಾನ್ ಡು ಫ್ರೀಜ್ 1-0-5-0.

SCROLL FOR NEXT