ಅಬುಧಾಬಿ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದ ಹ್ಯಾಮಿಲ್ಟನ್ ಸಂತಸದ ಕ್ಷಣ. ಚಿತ್ರಕೃಪೆ: ಬಿಬಿಸಿ 
ಕ್ರೀಡೆ

ಹ್ಯಾಮಿಲ್ಟನ್ ಮುಡಿಗೆ ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ಗರಿ

ಫಾರ್ಮುಲಾ 1 ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರು ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅಬುಧಾಬಿ: ಫಾರ್ಮುಲಾ 1 ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರು ಅಬುಧಾಬಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

29 ವರ್ಷದ ಬ್ರಿಟನ್ ಮೂಲದ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅಬುಧಾಬಿ ಗೆಲುವಿನ ಮೂಲಕ ಫಾರ್ಮುಲಾ 1ನಲ್ಲಿ ಎರಡನೇ ಬಾರಿ ಪ್ರಶಸ್ತಿಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗಳಿಸಿದ್ದ ಹ್ಯಾಮಿಲ್ಟನ್ ಆ ಬಳಿಕ ಸುಮಾರು 11 ಪ್ರಶಸ್ತಿಗಳನ್ನು ಗೆದ್ದು ಕೊಂಡಿದ್ದಾರೆ. ಆ ಮೂಲಕ ತಮ್ಮ ಖಾತೆಯ ಒಟ್ಟು ಅಂಕಗಳನ್ನು 384ಕ್ಕೆ ಏರಿಸಿಕೊಂಡಿದ್ದಾರೆ.

ಹ್ಯಾಮಿಲ್ಟನ್ ಪ್ರತಿನಿಧಿಸಿದ ಮರ್ಸಿಡೀಸ್ ತಂಡದವರೇ ಆದ ನಿಕೋ ರೋಸ್‌ಬರ್ಗ್ ಅವರ ಕಾರಿನಲ್ಲಿ ಎಂಜಿನ್ ದೋಷ ಕಾಣಿಸಿಕೊಂಡಿದ್ದರಿಂದ ಅವರು 14ನೇಯವರಾಗಿ ರೇಸ್ ಪೂರ್ಣಗೊಳಿಸಬೇಕಾಯಿತು. ಈ ಹಿಂದಿನ ಪರೀಕ್ಷಾ ಚಾಲನೆಯಲ್ಲಿ ರೋಸ್ ಬರ್ಗ್ ಅವರು ಹ್ಯಾಮಿಲ್ಟನ್‌ರನ್ನು ಹಿಂದಿಕ್ಕಿ ಮೊದಲ ಸ್ಥಾನಗಳಿಸಿದ್ದರು. ಇನ್ನು ಹ್ಯಾಮಿಲ್ಟನ್‌ಗೆ ತೀವ್ರ ಪ್ರತಿರೋಧ ತೋರಿದ ಈ ವರ್ಷದ ಯಶಸ್ವಿ ಚಾಲಕನೆಂಬ ಖ್ಯಾತಿ ಗಳಿಸಿದ ಸೆಬಾಸ್ಟಿಯನ್ ವೆಟ್ಟಲ್ ಅವರು ನಾಲ್ಕನೆಯವರಾಗಿ ಗುರಿ ಮುಟ್ಟಿದರು. ರೇಸ್ ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೂಯಿಸ್ ಹ್ಯಾಮಿಲ್ಟನ್ ಅವರು, 'ಇದು ನನ್ನ ಜೀವನದ ಅತ್ಯಂತ ದಿನ' ಎಂದು ಹರ್ಷ ವ್ಯಕ್ತಪಡಿಸಿದರು.

ಅಬುಧಾಮಿ ಗ್ರ್ಯಾಂಡ್ ಪ್ರಿಕ್ಸ್ ಗೆಲುವಿನ ಬಳಿಕ ಎರಡನೇ ಬಾರಿಗೆ ಫಾರ್ಮುಲಾ ಒನ್ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದ್ದು, ಈ ಹಿಂದೆ ಫರ್ನಾಂಡೋ ಆಲಾನ್ಸೋ ಮತ್ತು ದಂತಕಥೆ ಮೈಕೆಲ್ ಶೂಮಾಕರ್ ಅವರು ಈ ಸಾಧನೆ ಮಾಡಿದ್ದರು. ಫಾರ್ಮುಲಾ ಒನ್ ದಂತಕತೆ ಶೂಮಾಕರ್ ಅವರು ಒಟ್ಟು 7 ಬಾರಿ ಫಾರ್ಮುಲಾ ಒನ್ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದ್ದು, ಇದು ಈ ವರೆಗಿನ ದಾಖಲೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?