ಸಾನಿಯಾ-ಕಾರಾ ಮುಡಿಗೆ ಸಿಂಗಾಪುರ WTA ಗರಿ
ಸಿಂಗಾಪುರದಲ್ಲಿ ನಡೆದ WTA ಟೆನ್ನಿಸ್ ಫೈನಲ್ ಪಂದ್ಯದಲ್ಲಿ ಸಾನಿಯಾ-ಮಿರ್ಜಾ ಮತ್ತು ಕ್ಲಾರಾ ಬ್ಲಾಕ್ ಜೋಡಿ ಜಯ ದಾಖಲಿಸುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿದೆ.
ಸಿಂಗಾಪುರ: ಸಿಂಗಾಪುರದಲ್ಲಿ ನಡೆದ WTA ಟೆನ್ನಿಸ್ ಫೈನಲ್ ಪಂದ್ಯದಲ್ಲಿ ಸಾನಿಯಾ-ಮಿರ್ಜಾ ಮತ್ತು ಕ್ಲಾರಾ ಬ್ಲಾಕ್ ಜೋಡಿ ಜಯ ದಾಖಲಿಸುವ ಮೂಲಕ ಪ್ರಶಸ್ತಿಗೆ ಮುತ್ತಿಟ್ಟಿದೆ.
ಇದೇ ಮೊದಲ ಬಾರಿಗೆ WTA ಟೆನ್ನಿಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಇಂಡೋ-ಜಿಂಬಾಬ್ವೆ ಜೋಡಿ ತಮ್ಮ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿಗೆ ಮುತ್ತಿಡುವ ಮೂಲಕ ದಾಖಲೆ ಬರೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಚೀನಾದ ಸು ವಿ ಸಿಯ್ ಮತ್ತು ಶುಯ್ ಪೆಂಗ್ ಜೋಡಿಯನ್ನು 6-1, 6-0 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ಈ ಜೋಡಿ ಭರ್ಜರಿ ಜಯ ದಾಖಲಿಸಿದೆ.
ಮೂರನೇ ಬಾರಿಗೆ ಜೋಡಿಯಾಗಿರುವ ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲಾಕ್ ಅವರು ಇದೇ ಮೊದಲ ಬಾರಿಗೆ WTA ಟೆನ್ನಿಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಸಿಂಗಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆದಿದ್ದು, ಸತತ ಒಂದು ಗಂಟೆಗಳ ಕಾಲ ಈ ಜೋಡಿ ಗೆಲುವಿಗಾಗಿ ಸೆಣಸಿತ್ತು. ಅಂತಿಮವಾಗಿ 3 ಸೆಟ್‌ಗಳ ಪೈಕಿ 2ರಲ್ಲಿ ಭರ್ಜರಿ ಮೇಲುಗೈ ಸಾಧಿಸುವ ಮೂಲಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ತಿಂಗಳು ನಡೆದ ಯುಎಸ್ ಓಪನ್ ಪಂದ್ಯಾವಳಿಯಲ್ಲಿಯೂ ಸಾನಿಯಾ ಮತ್ತು ಕಾರಾ ಬ್ಲಾಕ್ ಜೋಡಿ ಫೈನಲ್ ಪ್ರವೇಶಿಸಿತ್ತು.