ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಗೇಮ್ಸ್: ಶೂಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ

ಏಷ್ಯನ್ ಗೇಮ್ಸ್ ನಲ್ಲಿ ಭಾರತ ತಂಡ 25 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಪುರುಷರ ಶೂಟಿಂಗ್ ತಂಡ ಬೆಳ್ಳಿಪದಕ ಪಡೆದುಕೊಂಡಿದೆ.

Srinivasa Murthy VN
Updated On : 26 Sept 2014, 7:36 am

ಇಂಚಾನ್: 17ನೇ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು, 25 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಪುರುಷರ ಶೂಟಿಂಗ್ ತಂಡ ಬೆಳ್ಳಿಪದಕ ಪಡೆದುಕೊಂಡಿದೆ.

ಆ್ಯಂಗ್ನಾನ್ ಅಂತಾರಾಷ್ಟ್ರೀಯ ಶೂಟಿಂಗ್ ಕೋರ್ಟ್ ನಲ್ಲಿ ನಡೆದ ಪುರುಷರ 25 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ಬಾಚಿಕೊಂಡಿದೆ. ಭಾರತೀಯ ಶೂಟರ್ ಗಳಾದ ಪೆಂಬಾ ತಮಂಗ್(288-22x), ಗುರುಪ್ರೀತ್ ಸಿಂಗ್(292-25x) ಮತ್ತು ವಿಜಯ್ ಕುಮಾರ್ (285-21x) ಅವರು ಜಂಟಿಯಾಗಿ 1740-68x ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದು ಭಾರತದ 16ನೇ ಪದಕವಾಗಿದ್ದು, ಶೂಟಿಂಗ್ ಸ್ಪರ್ಧೆಯಲ್ಲಿ ಬಂದ 8ನೇ ಪದಕವಾಗಿದೆ.

1742-56x ಅಂಕಗಳನ್ನು ಗಳಿಸಿದ ಚೀನಾದ ಯಾಂಗ್ಡೆ ಜಿನ್, ಚುವಾನ್ಲಿನ್ ಲಿ ಮತ್ತು ಫೆಂಗ್ ಡಿಂಗ್ ತಂಡ ಚಿನ್ನದ ಪದಕವನ್ನು ಪಡೆದಿದ್ದು, ದಕ್ಷಿಣ ಕೋರಿಯಾದ ಯಂಗ್ ಮಿನ್ ಕಿಮ್, ಡೇಕ್ಯುಜಂಗ್ ಮತ್ತು ಜಿನಿಲ್ ಕಿಮ್ ತಂಡ 1739-54x ಅಂಕದೊಂದಿಗೆ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement