ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಗೇಮ್ಸ್: ಸ್ಕ್ವಾಷ್‌ನಲ್ಲಿ ಭಾರತಕ್ಕೆ ಬೆಳ್ಳಿ ಖಚಿತ

Srinivasa Murthy VN
Updated On : 26 Sept 2014, 9:12 am

ಇಂಚಾನ್: ದಕ್ಷಿಣ ಕೋರಿಯಾದ ಇಂಚಾನ್‌ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಭಾರತೀಯ ಸ್ಕ್ವಾಷ್ ತಂಡ ಪದಕ ಈಗಾಗಲೇ ಪದಕ ಖಚಿತ ಪಡಿಸಿಕೊಂಡಿದ್ದು, ಮಹಿಳಾ ತಂಡಕ್ಕೆ ಬೆಳ್ಳಿ ಖಚಿತವಾಗಿದೆ.

ಜೋಶ್ನಾ ಚಿನ್ನಪ್ಪ, ಅನಕ ಅಲಂಕಾ ಹಾಗೂ ದೀಪಿಕಾ ಪಳ್ಳಿಕಲ್ ಅವರನ್ನೊಳಗೊಂಡ ಭಾರತದ ಮಹಿಳಾ ಸ್ಕ್ವಾಷ್ ತಂಡ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೋರಿಯಾ ತಂಡವನ್ನು 2-0 ಅಂತರದಿಂದ ಮಣಿಸಿದೆ. ಸೆಮಿ ಫೈನಲ್‌ನ ಆರಂಭದಲ್ಲಿಯೇ ಜೋಶ್ನಾ ಚಿನ್ನಪ್ಪ ಅವರು ದಕ್ಷಿಣ ಕೊರಿಯಾದ ಯುನೋಕ್ ಪಾರ್ಕ್ ಅವರನ್ನು 11-6, 13-11, 11-8 ನೇರ ಸೆಟ್‌ಗಳಿಂದ ಸೋಲಿಸಿದರು. ಕೇವಲ 34 ನಿಮಿಷಗಳಲ್ಲೇ ಮುಕ್ತಾಯಗೊಂಡ ಈ ಪಂದ್ಯದಲ್ಲಿ ಚೆನ್ನೈ ಮೂಲದ ಆಟಗಾರ್ತಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರು.

ಇನ್ನು 2ನೇ ಸರದಿಯಲ್ಲಿ ಕೋರ್ಟ್‌ಗೆ ಆಗಮಿಸಿದ ವಿಶ್ವದ 12ನೇ ಶ್ರೇಯಾಂಕದ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರು ಸುನ್‌ಮಿ ಸಂಗ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡರಾದರೂ, ಅಂಕಗಳಿಕೆ ಆಧಾರದ ಮೇಲೆ ಭಾರತ ತಂಡ ಅದಾಗಲೇ ಪಂದ್ಯ ಜಯಿಸಿತ್ತು. ಹೀಗಾಗಿ ಅನಕ ಅಲಂಕಾ ಅವರು ಕೋರ್ಟ್‌ಗೆ ಆಗಮಿಸುವ ಪರಿಸ್ಥಿತಿಯೇ ಉದ್ಭವಿಸಲಿಲ್ಲ. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ದಕ್ಷಿಣ ಕೋರಿಯಾದ ಆಟಗಾರ್ತಿ ಸುನ್‌ಮಿ ಸಂಗ್‌ಗೆ ಭಾರತದ ದೀಪಿಕಾ ಅವರು ತೀವ್ರ ಪೈಪೋಟಿ ನೀಡಿದ್ದರು. 11-4 11-5 8-11 11-5 ಸೆಟ್‌ಗಳ ಅಂತರದಿಂದ ದೀಪಿಕಾ ಪಂದ್ಯ ಕೈಚೆಲ್ಲಿದ್ದರು.

ಇನ್ನು ಪುರುಷರ ವಿಭಾಗದಲ್ಲಿ ಭಾರತದ ಮಂಗಾವ್ಕರ್, ಘೋಶಾಲ್ ಮತ್ತು ಸಂಧು ತಂಡ ಕುವೈತ್‌ನ ಅಲ್ಟಮಿಮಿ ಅಮ್ಮರ್, ಅಲ್ಮೆಝಯನ್ ಅಬ್ದುಲ್ಲಾ ತಂಡದ ವಿರುದ್ಧ ಜಯಗಳಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದಿದೆ. ಭಾರತದ ಮಂಗಾವ್ಕರ್ ಮತ್ತು ಕುವೈತ್‌ನ ಅಲ್ಟಮಿಮಿ ಅಮ್ಮರ್ ಮೊದಲ ಸರದಿಯ ಪಂದ್ಯ 11-4 11-3 12-10 ಸೆಟ್‌ಗಳ ಅಂತರದಿಂದ ಡ್ರಾ ಕಂಡಿತದಾದರೂ, ಘೋಶಾಲ್ ಮತ್ತು ಅಲ್ಮೆಝಯನ್ ಅಬ್ದುಲ್ಲಾ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 11-8 7-11 11-9 5-11 11-3 ಸೆಟ್‌ಗಳ ಅಂತರದಿಂದ ಭಾರತ ಜಯಶಾಲಿಯಾಗಿತ್ತು.

ಘೋಶಾಲ್ ಅವರು ಈಗಾಗಲೇ ವೈಯುಕ್ತಿಕ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬೆಳ್ಳಿ ಪದಕ ಸಾಧಿಸಿದ್ದು, ಇದೇ ಕುವೈತ್‌ನ ಅಲ್ಮೆಝಯನ್ ಅಬ್ದುಲ್ಲಾ ಅವರ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಸೋಲುಕಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement