ಕ್ರಿಕೆಟ್ ವಿಶ್ವಕಪ್ ಗೆದ್ದ ಟೀಂ ಇಂಡಿಯಾ 
ಕ್ರೀಡೆ

4 ವರ್ಷಗಳ ಹಿಂದೆ ಟೀಂ ಇಂಡಿಯಾ ವಿಶ್ವಕಪ್ ಗೆದ್ದದ್ದು ಇದೇ ದಿನ!

ಏಪ್ರಿಲ್ 2, 2011 ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದ ದಿನ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ...

ಏಪ್ರಿಲ್ 2, 2011 ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದ ದಿನ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ನುವಾನ್ ಕುಲಸೇಖರ ಅವರ ಎಸೆತಕ್ಕೆ ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಬಾರಿಸಿದಾಗ ದೇಶಕ್ಕೆ ದೇಶವೇ ಸಂತಸದಿಂದ ಕುಣಿದಾಡಿತ್ತು. 28 ವರ್ಷಗಳ ನಂತರ ಅಂದು ಭಾರತ ವಿಶ್ವಕಪ್ ಗೆದ್ದಿತ್ತು.

ಫೈನಲ್ ಪಂದ್ಯದಲಿ ಮಹೇಲಾ ಜಯವರ್ಧನೆ ಅವರ ಶತಕದ ಸಹಾಯದಿಂದ ಶ್ರೀಲಂಕಾ ಉತ್ತಮ ರನ್ ಪೇರಿಸಿತ್ತು. ಮಾತ್ರವಲ್ಲದೆ ಶ್ರೀಲಂಕಾ ಬೌಲರ್ಗಳು ವಿರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ನ್ನು ಬೇಗನೆ ಪೆವಿಲಿಯನ್ಗೆ ಕಳುಹಿಸಿದ್ದರು. ಸೆಹ್ವಾಗ್ ಮತ್ತು ಸಚಿನ್ ಔಟಾದಾಗ ಗೌತಮ್ ಗಂಭೀರ್ ಮತ್ತು ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾಕ್ಕೆ ಭದ್ರ ಬುನಾದಿ ನೀಡಿದರು. ಇತ್ತ ಕೊಹ್ಲಿ ಔಟಾದಾಗ ಧೋನಿ ಕ್ರೀಸ್ಗಿಳಿದಿದ್ದರು. ಗಂಭೀರ್ ಗೆ ಶತಕ ವಂಚಿತನಾಗಿದ್ದು ಔಟಾಗುವ ವೇಳೆ ಟೀಂ ಇಂಡಿಯಾವನ್ನು ವಿಜಯದತ್ತ ಕೊಂಡೊಯ್ದಿದ್ದರು. ಆವಾಗ ಧೋನಿಗೆ ಸಾಥ್ ನೀಡಿದ್ದು ಯುವರಾಜ್ ಸಿಂಗ್. ಧೋನಿಯ ಕೊನೆಯ ಸಿಕ್ಸರ್ ಭಾರತವನ್ನು ಗೆಲ್ಲಿಸಿತ್ತು. ಸಚಿನ್ ತೆಂಡೂಲ್ಕರ್ ಕನಸು ಕಂಡಿದ್ದ ಆ ಕಪ್ ಭಾರತ ಗೆದ್ದಿತ್ತು.

ಆ ವಿಶ್ವಕಪ್ ಪಂದ್ಯದಲ್ಲಿ ಪ್ರತಿಯೊಬ್ಬ ಆಟಗಾರನೂ ಉತ್ತಮ ಪ್ರದರ್ಶನ ನೀಡಿದ್ದರು. ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ಮತ್ತು ಸೆಹ್ವಾಗ್ ಶತಕ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧ ಸಚಿನ್ 120 ರನ್ ಬಾರಿಸಿ 98ನೇ ಅಂತಾರಾಷ್ಟ್ರೀಯ ಶತಕ  ದಾಖಲಿಸಿದ್ದರು. ಪ್ರಸ್ತುತ ಪಂದ್ಯಾವಳಿಯಲ್ಲಿ ಭಾರತ ಪರಾಭವಗೊಂಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ. ಯುವರಾಜ್ ಸಿಂಗ್ನ ಆಲ್ ರೌಂಡರ್ ಪ್ರದರ್ಶನ ಪ್ರತೀ ಪಂದ್ಯದಲ್ಲೂ ಎದ್ದು ಕಾಣುತ್ತಿತ್ತು. ಪಾಕಿಸ್ತಾನದ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ಅತ್ಯಧಿಕ ರನ್ ಗಳಿಸಿ ಟೀಂ ಇಂಡಿಯಾ ಫೈನಲ್ಗೆ ತಲುಪಿತ್ತು.

2011 ವಿಶ್ವಕಪ್ ಪಂದ್ಯದಲ್ಲಿ ಸಚಿನ್ 482 ರನ್ ಗಳಿಸಿದ್ದರೆ, ಜಹೀರ್ ಖಾನ್ 21 ವಿಕೆಟ್ ಕಬಳಿಸಿ ಟಾಪ್ ವಿಕೆಟ್ ಟೇಕರ್ ಆಗಿ ಮಿಂಚಿದ್ದರು. 90. 50 ಅವರೇಜ್ನಲ್ಲಿ  362 ರನ್ ಗಳಿಸಿದ್ದ ಯುವರಾಜ್ ಸಿಂಗ್, 15 ವಿಕೆಟ್ಗಳನ್ನು ಕಬಳಿಸಿದ್ದರು.

ಈ ವರ್ಷದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಳ್ಳುವ ಮೂಲಕ ವಿಶ್ವಕಪ್ ಪಂದ್ಯದಿಂದ ಹೊರಗೆ ಬಿತ್ತು. ಆದರೇನಂತೆ ಸತತ ಸೆಮಿಫೈನಲ್ ವರೆಗೆ ಸತತ 7 ಪಂದ್ಯಗಳನ್ನು ಗೆದ್ದು ಭಾರತ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ವರ್ಷದ ವಿಶ್ವಕಪ್ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ ಎಂಬ ನಿರಾಸೆ ಇದ್ದರೂ, 28 ವರ್ಷಗಳ ನಂತರ ವಿಶ್ವಕಪ್ ಗೆದ್ದ ಸಂಭ್ರಮದ ದಿನ ಇದು, ಈ ದಿನವನ್ನು ನೆನಪಿಸಿಕೊಳ್ಳೋಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT