ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

198 ಅಡಿಯಿಂದ ಗೋಲು!

ಸ್ಟಾಕ್ ತಂಡದ ಮಿಡ್ ಫೀಲ್ಡರ್ ಚಾರ್ಲಿ ಆ್ಯಡಮ್ಸ್, ಬರೋಬ್ಬರಿ 66 ಯಾರ್ಡ್ (198 ಅಡಿ) ದೂರದಿಂದ ಚೆಲ್ಸಾ ತಂಡದ ಗೋಲು ಪೆಟ್ಟಿಗೆಯೊಳಗೆ...

ಚಾರ್ಲಿ ಆ್ಯಡಮ್ಸ್ ರ ಅಮೋಘ ಗೋಲು
Srinivasa Murthy VN
Updated On : 6 Apr 2015, 9:21 am

ಲಂಡನ್: ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಭಾನುವಾರ ನಡೆದ ಚೆಲ್ಸಾ ಹಾಗೂ ಸ್ಟಾಕ್ ತಂಡಗಳ ನಡುವಿನ ಪಂದ್ಯ ಸೋಜಿಗದ ಸಾಧನೆಗೆ ಸಾಕ್ಷಿಯಾಯಿತು.

ಸ್ಟಾಕ್ ತಂಡದ ಮಿಡ್  ಫೀಲ್ಡರ್ ಚಾರ್ಲಿ ಆ್ಯಡಮ್ಸ್, ಬರೋಬ್ಬರಿ 66 ಯಾರ್ಡ್ (198 ಅಡಿ) ದೂರದಿಂದ ಚೆಲ್ಸಾ ತಂಡದ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ನುಗ್ಗಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಪಂದ್ಯದ 44ನೇ ನಿಮಿಷದಲ್ಲಿ ಮೈದಾನ ಮಧ್ಯ ಗೆರೆಯ ಬಳಿಯಲ್ಲಿದ್ದ ಚಾರ್ಲಿ, ಚೆಂಡನ್ನು ತಮ್ಮ ಹತೋಟಿಗೆ ತರುವ ಪ್ರಯತ್ನದಲ್ಲಿದ್ದರು. ಅತ್ತ, ಚೆಲ್ಸಾ ತಂಡದ ಗೋಲು ಪೆಟ್ಟಿಗೆಯನ್ನು ಕಾಯುತ್ತಿದ್ದ ತಿಬೌಟ್ ಕೋರ್ಶಿಯಸ್ ಅವರು ಗೋಲು ಪೆಟ್ಟಿಗೆಯಿಂದ ಸಾಕಷ್ಟು ಮುಂದೆಬಂದಿರುವುದನ್ನು ಗಮನಿಸಿದ ಚಾರ್ಲಿ, ತಮ್ಮ ಎಡಗಾಲಿನಿಂದ ಚೆಂಡಿಗೆ ಬಲವಾದ ಕಿಕ್ ಕೊಟ್ಟರು.

ಅಲ್ಲಿಂದ ಹಾರಿದ ಚೆಂಡು ಗೋಲು ಪೆಟ್ಟಿಗೆಯ ಮೇಲ್ಭಾಗದಿಂದ ಹಾರಿ ಬಂದ ಚೆಂಡು ನೇರವಾಗಿ ಗೋಲ್ ಪೆಟ್ಟಿಗೆಯ ಒಳಸೇರಿತು. ಕೊನೆಯ ಕ್ಷಣದಲ್ಲಿ ಈ ಅಪಾಯವನ್ನರಿತ ತಿಬೌಟ್ ತಮ್ಮೆರಡೂ ಕೈಗಳನ್ನೆತ್ತಿ ಗೋಲು ತಪ್ಪಿಸಲು ಪ್ರಯತ್ನಿಸಿದರಾದರೂ, ಅವರು ತೀರಾ ಮುಂದೆ ಇದ್ದಿದ್ದರಿಂದ ಚೆಂಡು ಅವರ ಕೈ ಬೆರಳುಗಳನ್ನು ಸವರಿಕೊಂಡು ಗೋಲು ಪೆಟ್ಟಿಗೆ ಸೇರಿತು. ಈ ಪಂದ್ಯದಲ್ಲಿ ಸ್ಟಾಕ್ ತಂಡ, 1-2 ಗೋಲುಗಳ ಅಂತರದಲ್ಲಿ ಚೆಲ್ಸಾ ವಿರುದ್ಧ ಸೋತಿತಾದರೂ, ಚಾರ್ಲಿ ದಾಖಲಿಸಿದ ಗೋಲ್ ಮಾತ್ರ ಎಲ್ಲರ ಹೃದಯ ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿ, ಲಕ್ಷಾಂತರ ಸಂಖ್ಯೆಯಲ್ಲಿ ಅಭಿಪ್ರಾಯ ವಿನಿಮಯವಾಗಿವೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement