ಕೋಲ್ಕತಾ: ಅದ್ಧೂರಿಯಾಗಿ ನಡೆಯಲಿರುವ 2015ರ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ಸಾನಿಧ್ಯವಹಿಸಲು ಎಷ್ಟು ಮಂದಿಗೆ ಅವಕಾಶ ಸಿಗಲಿದೆ ಗೊತ್ತಾ ? ಕೇವಲ 30 ಸಾವಿರ ಮಂದಿಗೆ..!
ಹೌದು...ಅಚ್ಚರಿಯಾದರೂ ಇದು ಸತ್ಯ..!
ಸಮಾರಂಭ ನಡೆಯಲಿರುವ ಸಾಲ್ಟ್ ಲೇ ಕ್ ಕ್ರೀಡಾಂಗಣ ಸುಮಾರು ಒಂದು ಲಕ್ಷ ಮಂದಿಗೆ ಸ್ಥಾನ ಕಲ್ಪಿಸುವ ಸಾಮರ್ಥ್ಯವಿದ್ದು. ಹೀಗಿದ್ದರೂ, ಸಮಾರಂಭಕ್ಕಾಗಿ ಕೇವಲ 30 ಸಾವಿರ ಟಿಕೆಟ್ ಗಳನ್ನು ಮಾತ್ರ ಬಿಡುಗಡೆಗೊಳಿಸಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಈ ಬಗ್ಗೆ ವಿವರಣೆ ನೀಡಿದ ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸುಬಿರ್ ಗಂಗೂಲಿ, ಕ್ರೀಡಾಂಗಣದ ಕೆಲ ಗ್ಯಾಲರಿಗಳನ್ನು ವೇದಿಕೆಗಾಗಿ ಬಳಸಿಕೊಳ್ಳುತ್ತಿರುವುದರಿಂದ ಕೆಲವೇ
ಗ್ಯಾಲರಿಗಳನ್ನು ಪ್ರೇಕ್ಷಕರಿಗಾಗಿ ನೀಡಲಾಗಿದೆ ಎಂದಿದ್ದಾರೆ. ಬಿಸಿಸಿಐನ ಅತಿಥಿಗಳೂ ಇಲ್ಲೇ ಕೂರಬೇಕಾಗಿದೆ ಎಂದಿದ್ದಾರೆ.