ಕ್ರೀಡೆ

ಧೋನಿ ಹೇಳಿದರೆ 24ನೇ ಮಹಡಿಯಿಂದ ಜಿಗಿಯುವೆ: ಇಶಾಂತ್ ಶರ್ಮಾ

ನವದೆಹಲಿ: ತಮ್ಮ ಮೆಚ್ಚಿನ ನಾಯಕರ ಬಗ್ಗೆ ಅಪಕ್ವವಾದ ಹೇಳಿಕೆಗಳನ್ನು ನೀಡುವುದು ಭಾರತೀಯ ರಾಜಕಾರಣದಲ್ಲಿ ಮಾಮೂಲು. ಇತ್ತೀಚೆಗೆ, ಚತ್ತೀಸ್‍ಗಡದ ಕಾಂಗ್ರೆಸ್ ನಾಯಕರೊಬ್ಬರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಕಸ ಗುಡಿಸು ಎಂದರೂ ಗುಡಿಸುವೆ ಎಂದಿದ್ದರು. ಆದರೆ, ಇಂಥ ಹೇಳಿಕೆಗಳು ಇದೀಗ ಕ್ರೀಡಾ ವಲಯಕ್ಕೂ ವ್ಯಾಪಿಸಿದೆ.

ಟೀಂ ಇಂಡಿಯಾ ಆಟಗಾರ ಇಶಾಂತ್ ಶರ್ಮಾ ಅವರು ತಂಡದ ನಾಯಕ ಧೋನಿ ಬಗ್ಗೆ ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಧೋನಿಯವರು 24ನೇ ಮಹಡಿಯಿಂದ ಕೆಳಕ್ಕೆ ಹಾರು ಎಂದರೂ ಹಾರುತ್ತೇನೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಆಸೀಸ್ ಪ್ರವಾಸದಲ್ಲಿದ್ದಾಗ ಗಾಯದ ಸಮಸ್ಯೆಗೊಳಗಾಗಿ ಅವರು ತವರಿಗೆ ವಾಪಸ್ಸಾಗಿದ್ದರು. ಇದೇ ಕಾರಣಕ್ಕಾಗಿ ವಿಶ್ವಕಪ್ ನಲ್ಲಿ ಆಡುವ ಅವಕಾಶ ಕಳೆದುಕೊಂಡರು. ಇದರಿಂದ ತೀವ್ರ ಬೇಸರದಲ್ಲಿದ್ದಾಗ ಧೋನಿ ಸಮಾಧಾನಪಡಿಸಿದ್ದನ್ನು ಸ್ಮರಿಸಿದ ಅವರು, ಧೋನಿ ಹೇಳಿದರೆ 24ನೇ ಮಹಡಿಯಿಂದ ಜಿಗಿಯಲು ಸಿದ್ಧ ಎಂದಿದ್ದಾರೆ.

SCROLL FOR NEXT