ಜಾರ್ಖಂಡ್: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರ ಬೈಕ್ ಕಲೆಕ್ಷನ್ ಗೆ ಮತ್ತೊಂದು ಸೂಪರ್ ಫಾಸ್ಟ್ ಬೈಕ್ ಸೇರ್ಪಡೆಗೊಂಡಿದೆ.
ಎಂಎಸ್ ಡಿ ಬೈಕ್ ಪ್ರೀತಿ ಎಷ್ಟೆಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ, ಪ್ರಸ್ತುತ ಐಪಿಎಸ್ ನಲ್ಲಿ ಬಿಸಿಯಾಗಿರುವ ಧೋನಿ ತಮ್ಮ ಬೈಕ್ ಕಲೆಕ್ಷನ್ ಗೆ ಮತ್ತೊಂದು ಬೈಕ್ ಅನ್ನು
ಸೇರ್ಪಡೆಗೊಳಿಸಿದ್ದಾರೆ. ಅದು ಅಂತಿಂಥ ಬೈಕಲ್ಲ. ಭಾರತದ ರಸ್ತೆಗಳಲ್ಲಿ ಅತ್ಯಂತ ವೇಗವಾಗಿ ಚೆಲಿಸಬಲ್ಲ ಕವಾಸಕಿ ನಿಂಝಾ ಹೆಚ್-2 ಬೈಕನ್ನು ಧೋನಿ ಖರೀದಿಸಿದ್ದಾರೆ.
ಈಗಾಗಲೇ ಕಾನ್ ಫಿಡರೇಟ್ ಹೆಲ್ಲ್ ಕ್ಯಾಟ್ X132, ಡುಗಾಟಿ 1098, ಕವಾಸಕಿ ನಿಂಝಾ ZX14R, ಹಾರ್ಲೆಡೇವಿಡ್ ಸನ್ ಫ್ಯಾಟ್ ಬಾಯ್, ಯಮಹಾ YZF600 ಸೇರಿದಂತೆ ಹಲವು ವಿದೇಶಿ ಬೈಕ್‌ಗಳನ್ನು ಹೊಂದಿರುವ ಧೋನಿ ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಕವಾಸಕಿ ನಿಂಝಾ ಹೆಚ್-2 ಬೈಕ್ ಅನ್ನು ಈಗಾಗಲೇ ಮನೆಗೆ ತಂದಿದ್ದಾರೆ.
ಸದ್ಯದಲ್ಲಿಯೇ ಅದರ ಸವಾರಿ ಕೂಡ ಮಾಡಲಿದ್ದಾರೆ. ಇದು ರೇಸಿಂಗ್ ಬೈಕ್ ಮಾದರಿಯಾಗಿದ್ದು, ಇದರ ಬೆಲೆ ಸರಿಸುಮಾರು ಒಂದು ಕೋಟಿ ಆಸುಪಾಸು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಅತಿ ವೇಗದ ಬೈಕ್ ಎಂಬ ಖ್ಯಾತಿಗೂ ಈ ಬೈಕ್ ಒಳಗಾಗಿದೆ.