ರಾಜಸ್ತಾನ ರಾಯಲ್ಸ್ ತಂಡ 
ಕ್ರೀಡೆ

ಆಟಗಾರನನ್ನು ಬುಕ್ಕಿ ಸಂಪರ್ಕಿಸಿದ್ದು ನಿಜ: ದಾಲ್ಮಿಯಾ

ರಾಜಸ್ತಾನ ತಂಡ ಆಟಗಾರನೊಬ್ಬನನ್ನು ಬುಕ್ಕಿಗಳು ಸಂಪರ್ಕಿಸಿದ್ದು ನಿಜ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಹೇಳಿದ್ದಾರೆ..

ಮುಂಬೈ: ರಾಜಸ್ತಾನ ತಂಡ ಆಟಗಾರನೊಬ್ಬನನ್ನು ಬುಕ್ಕಿಗಳು ಸಂಪರ್ಕಿಸಿದ್ದು ನಿಜ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಹೇಳಿದ್ದಾರೆ.

ರಾಜಸ್ತಾನ ರಾಯಲ್ಸ್ ತಂಡದ ಆಟಗಾರನನ್ನು ಬುಕ್ಕಿಗಳು ಸಂಪರ್ಕಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಜಗಮೋಹನ್ ದಾಲ್ಮಿಯಾ, ಆಟಗಾರನನ್ನು ರಣಜಿ ಆಟಗಾರನೋರ್ವನ ಮೂಲಕ ಬುಕ್ಕಿಗಳು ಸಂಪರ್ಕಿಸಿರುವುದು ಬೆಳಕಿಗೆ ಬಂದಿದೆ. ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ ಈ ಕುರಿತು ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಕೋಲ್ಕತಾದಲ್ಲಿ ಮಾತನಾಡಿದ ದಾಲ್ಮಿಯಾ ಅವರು, ಇದು ಒಳ್ಳೆಯ ಬೆಳವಣಿಗೆಯಾಗಿದ್ದು, ಬುಕ್ಕಿ ಆಟಗಾರನನ್ನು ಸಂಪರ್ಕಿಸುತ್ತಿದ್ದಂತೆಯೇ ಆತ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾನೆ. ಐಪಿಎಲ್ ನಲ್ಲಿ ಫಿಕ್ಸಿಂಗ್ ಅನ್ನು ತಡೆಯಲು ನಾವು ಈ ಹಿಂದೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೆವು. ಅದರ ಶ್ರಮದಿಂದಾಗಿ ಇಂದು ಆಟಗಾರರು ಬುಕ್ಕಿಗಳಿಂದ ದೂರವುಳಿಯುವಂತಾಗಿದೆ. ಇನ್ನು ಪ್ರಸಕ್ತ ಐಪಿಎಲ್ ಸರಣಿಗಾಗಿಯೂ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದೇವೆ ಎಂದು ಹೇಳಿದರು. ಅಲ್ಲದೆ ಪ್ರಸಕ್ತ ಘಟನೆ ಕುರಿತಂತೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ದಾಲ್ಮಿಯಾ, ಇದೊಂದು ಗಂಭೀರ ವಿಚಾರವಾಗಿದ್ದು, ವಿಚಾರಣೆಯ ಹಂತದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂಬೈ ಮೂಲದ ರಾಜಸ್ತಾನ ತಂಡದ ಆಟಗಾರನೊಬ್ಬನನ್ನು ಬುಕ್ಕಿಗಳು ಸಂಪರ್ಕಿಸಿದ್ದು, ಫಿಕ್ಸಿಂಗ್ ಮಾಡುವಂತೆ ಪ್ರಚೋದಿಸಿದ್ದರು ಎಂದು ನಿನ್ನೆ ವರದಿಯಾಗಿತ್ತು. ಬಿಸಿಸಿಐನ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರೇ ಈ ವಿಚಾರವನ್ನು ಹೇಳಿದ್ದರು. ಪ್ರಸ್ತುತ ಮುಂಬೈ ರಾಜ್ಯದಿಂದ ರಾಜಸ್ತಾನ ರಾಯಲ್ಸ್ ತಂಡವನ್ನು 5 ಮಂದಿ ಪ್ರತಿನಿಧಿಸುತ್ತಿದ್ದು, ಅಜಿಂಕ್ಯಾ ರಹಾನೆ, ಪ್ರವೀಣ್ ತಾಂಬೆ, ದಿನೇಶ್ ಸಾಳುಂಕೆ, ಧವಳ್ ಕುಲಕರ್ಣಿ ಮತ್ತು ಅಭಿಶೇಕ್ ನಾಯರ್ ಅವರು ರಾಜಸ್ತಾನ ತಂಡದ ಪರವಾಗಿ ಆಡುತ್ತಿದ್ದು, ಈ ಐದು ಆಟಗಾರರ ಪೈಕಿ ಓರ್ವ ಆಟಗಾರನನ್ನು ಬುಕ್ಕಿಗಳು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video