ಬ್ರೆಂಡಾನ್ ಮೆಕಲಂ 
ಕ್ರೀಡೆ

ಚೆನ್ನೈಗೆ ಸೂಪರ್ ಜಯ

ಎಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಶತಕದ ಸಾಧನೆ ಹೊರಹೊಮ್ಮಿದೆ...

ಚೆನ್ನೈ: ಎಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಶತಕದ ಸಾಧನೆ ಹೊರಹೊಮ್ಮಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‍ಮನ್ ಬ್ರೆಂಡನ್ ಮೆಕಲಂ ಇದರ ರೂವಾರಿ. ನ್ಯೂಜಿಲೆಂಡ್ ಮೂಲದ ಮೆಕಲಂರ ಈ ಸ್ಫೋಟಕ ಶತಕದ ಪರಿಣಾಮ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಗೆಲವು ಸಂಪಾದಿಸಿದೆ. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 45 ರನ್‍ಗಳಿಂದ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಸದೆಬಡಿಯಿತು.

ಗೆಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 210 ರನ್‍ಗಳ ಬೃಹತ್ ಮೊತ್ತದ ಗುರಿ ಬೆಂಬತ್ತಿದ್ದ ಸನ್‍ರೈಸರ್ಸ್ ಹೈದರಾಬಾದ್ ತಂಡಕ್ಕೆ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್‍ಗಳಿಸಲಷ್ಟೇ ಸಾಧ್ಯವಾಯಿತು. ಆರಂಭಿಕ ಬ್ಯಾಟ್ಸಮನ್ ನಾಯಕ ಡೇವಿಡ್ ವಾರ್ನರ್ 42 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸೇರಿದಂತೆ 53 ರನ್‍ಗಳಿಸಿದ್ದೇ ತಂಡದ ಪರ ಉತ್ತಮ ಸಾಧನೆಯಾಯಿತು. ಇತರೆ ಬ್ಯಾಟ್ಸಮನ್ ಗಳು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲರಾದರು. ಅರಂಭಿಕ ಪಂದ್ಯದಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ತಂಡಕ್ಕೆ ಸೋಲುಣಿಸಿದ್ದ ಚೆನ್ನೈ ಕಿಂಗ್ಸ್ ಎರಡನೇ ಪಂದ್ಯದಲ್ಲೂ ರೋಚಕ ಗೆಲವು ದಾಖಲಿಸಿ ವಿಜಯೋತ್ಸವ ಮುಂದುವರಿಸಿತು.

ಮೆಕಲಂ ಶತಕದ ಅಬ್ಬರ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 209 ರನ್‍ಗಳ ಬೃಹತ್ ಮೊತ್ತ ಸಂಪಾದಿಸಿತು. ಆರಂಭಿಕ ಬ್ರೆಂಡನ್ ಮೆಕಲಂ ಕೇವಲ 56 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್ ಒಳಗೊಂಡ ಅಜೇಯ 100 ರನ್ ಸಿಡಿಸಿ ಚೆನ್ನೈ ಕಿಂಗ್ಸ್‍ಗೆ ನೆರವಾದರು. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಿಸಿದ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಹೊಂದಿದ್ದ 53 ರನ್ ಚಚ್ಚಿದರು. ಮೆಕಲಂ ಮತ್ತು ಧೋನಿ ಮೂರನೇ ವಿಕೆಟ್ ಜೊತೆಯಾಟದಲ್ಲಿ ಕೇವಲ 35 ಎಸೆತಗಳಲ್ಲಿ 63 ರನ್ ಸಿಡಿಸಿದರು. ಅಂತಿಮ ಓವರ್ ಆರಂಭಕ್ಕೆ ಮುನ್ನ ಮೆಕಲಂ 89 ರನ್‍ಗಳಿಸಿದ್ದರು. ಆಗ ದಾಳಿಗಿಳಿದಿದ್ದ ಬೌಲ್ಟ್ ರ ಮೊದಲ ಎಸೆತವನ್ನು ಬೌಂಡರಿಗೆ ಕಳುಹಿಸಿದ್ದ ಧೋನಿ, ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಬಳಿಕ ಮೂರನೇ ಎಸೆತದಲ್ಲಿ ಜಡೇಜಾ ರನೌಟ್ ಆಗಿ ನಿರ್ಗಮಿಸಿದರು. ಕೊನೆಯ 3ಡಿ ಎಸೆತಗಳಲ್ಲಿ ಮೆಕಲಂಗೆ 11 ರನ್‍ಗಳಿಸಿ ಶತಕ ಪೂರೈಸಬೇಕಿತ್ತು. ಆದರೆ, ಐದು ಮತ್ತು ಆರನೇ ಎಸೆತಗಳಲ್ಲಿ ಅವರು ಕ್ರಮವಾಗಿ ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ್ದಲ್ಲದೇ, ಅಂತಿಮ ಎಸೆತದಲ್ಲಿ ಒಂದು ರನ್ ಕದಿಯುವ ಮೂಲಕ ಮೂರಂಕಿಯ ಗಡಿ ತಲುಪಿ ಕುಣಿದು ಕುಪ್ಪಳಿಸಿದರು. ಧೋನಿ ಕೂಡ ಅಬ್ಬರಿಸಿದರು. ಇನಿಂಗ್ಸ್‍ನ 18ನೇ ಓವರ್ ಎಸೆದ ಕರಣ್ ಶರ್ಮಾಗೆ ಧೋನಿ 3 ಸಿಕ್ಸರ್ ಬಾರಿಸಿದ್ದು ಗಮನಾರ್ಹವಾಗಿತ್ತು.

ವೇಗಿ ಡೇಲ್ ಸ್ಟೇಯ್ನ್ ಅನುಪಸ್ಥಿತಿಯಲ್ಲಿ ಸನ್ ರೈಸರ್ಸ್ ಬೌಲಿಂಗ್ ವಿಭಾಗ ಬಡವಾಗಿತ್ತು. ಇಶಾಂತ್ ಶರ್ಮಾ ಮತ್ತು ಕರಣ್ ಶರ್ಮಾ ಸಾಕಷ್ಟು ದಂಡನೆಗೆ ಒಳಗಾದರು. ಟ್ರೆಂಟ್ ಬೌಲ್ಟ್ ಮಾತ್ರ 1 ವಿಕೆಟ್ ಪಡೆಯಲು ಶಕ್ತರಾದರೆ, ಉಳಿದ ಮೂರು ವಿಕೆಟ್‍ಗಳು ರನೌಟ್ ರೂಪದಲ್ಲಿ ಹೈದರಾಬಾದ್ ಬುಟ್ಟಿಗೆ ಬಿದ್ದವು. ಮುಖ್ಯವಾಗಿ ಮೆಕಲಂರ ಕಠಿಣ ಶಿಕ್ಷೆಯಿಂದಾಗಿ ಸನ್‍ರೈಸರ್ಸ್ ಬೌಲರ್‍ಗಳ ಲೈನ್ ಅಂಡ್ ಲೆಂಗ್ತ್ ದಿಕ್ಕು ತಪ್ಪುವಂತಾಯಿತು.

ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 4 ವಿಕೆಟ್‍ಗೆ 209

ಡ್ವೈನ್ ಸ್ಮಿತ್ ರನೌಟ್ 27 (26 ಎಸೆತ, 4 ಬೌಂಡರಿ, 1 ಸಿಕ್ಸರ್), ಬ್ರೆಂಡನ್ ಮೆಕಲಂ ಅಜೇಯ 100 (56 ಎಸೆತ, 7 ಬೌಂಡರಿ, 9 ಸಿಕ್ಸರ್), ಸುರೇಶ್ ರೈನಾ ರನೌಟ್ 14 (12 ಎಸೆತ, 1 ಬೌಂಡರಿ), ಮಹೇಂದ್ರ ಸಿಂಗ್ ಧೋನಿ ಸಿ ವಾರ್ನರ್ ಬಿ ಬೌಲ್ಟ್ 53 (29 ಎಸೆತ, 4 ಬೌಂಡರಿ, 4 ಸಿಕ್ಸರ್), ರವೀಂದ್ರ ಜಡೇಜಾ ರನೌಟ್ 0 (1 ಎಸೆತ), ಡ್ವೈನ್ ಬ್ರಾವೊ ಅಜೇಯ 0.

ಇತರೆ: (ಲೆಗ್‍ಬೈ-7, ವೈ-4, ನೋಬಾಲ್-4) 15.
ವಿಕೆಟ್ ಪತನ: 1-75, 2-135, 3-198, 4-198.
ಬೌಲಿಂಗ್ ವಿವರ: ಭುವನೇಶ್ವರ 4-0-31-0, ಬೌಲ್ಟ್ 4-0-34-1, ಇಶಾಂತ್ 3-0-46-0, ಕರಣ್ ಶರ್ಮಾ 4-0-51-0, ಬೊಪಾರ 4-0-29-0, ಪರ್ವೇಜ್ 1-0-11-0.

ಸನ್‍ರೈಸರ್ಸ್ ಹೈದರಾಬಾದ್ 20 ಓವರುಗಳಲ್ಲಿ 6 ವಿಕೆಟ್‍ಗೆ 164
ಡೇವಿಡ್ ವಾರ್ನರ್ ಸಿ ಸ್ಮಿತ್ ಬಿ ಪಾಂಡೆ 53 (42 ಎಸೆತ, 1 ಬೌಂಡರಿ, 3 ಸಿಕ್ಸರ್), ಶಿಖರ್ ಧವನ್ ಸಿ ಜಡೇಜಾ ಬಿ ಮೋಹಿತ್ 26 (18ಎಸೆತ, 5 ಬೌಂಡರಿ), ಕೆ.ಎಲ್. ರಾಹುಲ್ ಬಿ ಮೋಹಿತ್ 5 (8ಎಸೆತ, 1 ಬೌಂಡರಿ), ನಮನ್ ಓಜಾ ಸಿ ಮೋಹಿತ್ ಬಿ ಅಶ್ವಿನ್ 15 (11 ಎಸೆತ, 1 ಸಿಕ್ಸರ್), ರವಿ ಬೊಪಾರ ಬಿ ಬ್ರಾವೊ 22 (15 ಎಸೆತ, 2 ಸಿಕ್ಸರ್), ಕೇನ್ ವಿಲಿಯಮ್ಸನ್ ಅಜೇಯ 26 (18 ಎಸೆತ, 1 ಬೌಂಡರಿ, 1 ಸಿಕ್ಸರ್), ಕರಣ್ ಶಮರ್Á ಸಿ ರೈನಾ ಬಿ ಬ್ರಾವೊ 4 (6 ಎಸೆತ), ಪರ್ವೇಜ್ ರಸೂಲ್ ಅಜೇಯ 2 (2 ಎಸೆತ).
ಇತರೆ: (ಲೆಗ್‍ಬೈ-7, ವೈ-4) 11.
ವಿಕೆಟ್ ಪತನ: 1-30, 2-46, 3-91, 4-114, 5-136, 6-150.
ಬೌಲಿಂಗ್ ವಿವರ: ಆಶಿಶ್ ನೆಹ್ರಾ 4-0-31-0, ಮೋಹಿತ್ 4-0-36-2, ಈಶ್ವರ್ 3-0-26-1, ಅಶ್ವಿನ್ 4-0-22-1, ಡ್ವೈನ್ ಬ್ರಾವೊ 4-0-25-2, ಜಡೇಜಾ 1-0-17-0.

ಪಂದ್ಯಶ್ರೇಷ್ಠ: ಬ್ರೆಂಡಾನ್ ಮೆಕಲಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ