ಮುಂಬೈ: ಭಾರತೀಯಕರ ಆರಾಧ್ಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತೆ ಕ್ರಿಕೆಟ್ ಬದುಕಿಗೆ ಮರುಳುವ ಸೂಚನೆ ನೀಡಿದ್ದಾರೆ.
41 ವರ್ಷದ ಸಚಿನ್ ತೆಂಡುಲ್ಕರ್ ಕ್ರಿಕೆಟ್ಗೆ ಮರಳುವ ಸೂಚನೆ ನೀಡಿರುವುದು ತಮ್ಮ ಟ್ವೀಟರ್ ಖಾತೆಯಲ್ಲಿ. ಮುಂಬೈ ಇಂಡಿಯನ್ಸ್ ಜರ್ಸಿ ತೊಟ್ಟಿರುವ ಸಚಿನ್ ತೆಂಡುಲ್ಕರ್, ಹೆಲ್ಮೆಟ್ ಹಾಕಿಕೊಳ್ಳುವ ಫೋಟೊ ಅಪ್ಲೋಡ್ ಮಾಡಿದ್ದಾರೆ ಅಷ್ಟೇ ಅಲ್ಲಾ, ಗೇಸ್ ವಾಟ್ ಎಂದು ಟ್ವೀಟ್ ಮಾಡಿದ್ದಾರೆ. ಇದೇ ಫೋಟೋ ಸಚಿನ್ ಮತ್ತೇ ಕಣಕ್ಕಿಳಿಯುವ ತಯಾರಿಯಲ್ಲಿದ್ದಾರೆಯೇ ಎಂಬ ಅನುಮಾನವನ್ನು ಹುಟ್ಟು ಹಾಕಿರುವುದು.
2013ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ಸಚಿನ್ ತೆಂಡೂಲ್ಕರ್ ವಿದಾಯ ಹೇಳಿದ್ದರು. ಆರು ಸೀಸನ್ ಮುಂಬೈ ಇಂಡಿಯನ್ಸ್ ಗಾಗಿ ಐಪಿಎಲ್ ಆಡಿದ ಸಚಿನ್ ತಮ್ಮ ಅದ್ಭುತ ಆಟದಿಂದ ಎಲ್ಲರ ಗಮನಸೆಳೆದಿದ್ದರು. ಉತ್ತಮ ಫಾರ್ಮ್ನಲ್ಲಿರುವಾಗಲೇ ಕ್ರಿಕೆಟ್ಗೆ ವಿದಾಯ ಹೇಳಿದ್ದರು.