ಬೆಂಗಳೂರು: ಆರ್‍ಸಿಬಿ ಇನಿಂಗ್ಸ್ ಆರಂಭದಲ್ಲಿ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್ ಗೇಯ್ಲ್ ಮಂದಗತಿಯ ಬ್ಯಾಟಿಂಗ್‍ಗೆ ಮುಂದಾದರು.
ಲಸಿತ್ ಮಾಲಿಂಗ ಮಾಡಿದ ಇನಿಂಗ್ಸ್ ನ ಮೊದಲ ಓವರ್ ಎದುರಿಸಿದ ಅವರು, ಯಾವುದೇ ರನ್ ಗಳಿಸಲಿಲ್ಲ. ಇದನ್ನು ನೋಡುತ್ತಿದ್ದ ಪೊಲಾರ್ಡ್ ಸೀದಾ ಗೇಯ್ಲ್ ಬಳಿಗೆ ಸಾಗಿ ಏನೇನೋ
ಪಿಸುಗುಟ್ಟಿದರು. ಸ್ಲೆಡ್ಜಿಂಗ್ ವಿವಾದದಿಂದ ಪೊಲಾರ್ಡ್ ಕುಖ್ಯಾತಿ ಗಳಿಸಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಎಚ್ಚೆತ್ತ ಅಂಪೈರ್, ಪೊಲಾರ್ಡ್ ಗೆ ಫೀಲ್ಡಿಂಗ್ ಗೆ ಮರಳುವಂತೆ ಸೂಚಿಸಿದರು. ಆದರೂ, ಒಂದು ಹೆಜ್ಜೆ ಹಿಂದೆ ಸರಿದಂತೆ ಮಾಡಿದ ಪೊಲಾರ್ಡ್ ಮತ್ತೆ ಗೇಯ್ಲ್ ಗೆ ಏನೋ ಹೇಳಿದರು. ಹಾಗಾಗಿ, ಅಂಪೈರ್ ಕಡೆಯಿಂದ ಮತ್ತೊಂದು ಎಚ್ಚರಿಕೆಯನ್ನು ಎದುರಿಸಬೇಕಾಯಿತು. ಇದಕ್ಕೆ ಸ್ಪಂದಿಸಿದ ಪೊಲಾರ್ಡ್, ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡು ನಾನಿನ್ನು ಸುಮ್ಮನಿರುತ್ತೇನೆ ಎಂದು ಸಾಂಕೇತಿಕವಾಗಿ ತೋರಿಸಿಕೊಂಡರು.