ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ಯಾರಾ ಅಥ್ಲೀಟ್ ಗಳಿಗೆ ಮೂಲಭೂತ ಸೌಕರ್ಯ ಒದಗಿಸುವ, ಆಡಳಿತ, ತಾಂತ್ರಿಕ ವಿಷಯಗಳಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತೀಯ ಪ್ಯಾರಾಲಿಂಪಿಕ್ಸ್ (ಪಿಸಿಐ) ಸಂಸ್ಥೆಯನ್ನು ಕೇಂದ್ರ ಕ್ರೀಡಾ ಸಚಿವಾಲಯ ವಜಾಗೊಳಿಸಿದೆ.
ಮಾರ್ಚ್ 20ರಿಂದ 22ರವರೆಗೆ ಗಾಜಿಯಾಬಾದ್ ನಲ್ಲಿ ಆಯೋಜಿಸಲಾಗಿದ್ದ 15ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನಲ್ಲಿ ಕಳಪೆ ಮೂಲಸೌಕರ್ಯಗಳನ್ನು ನೀಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕಾಗಿ, ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಸಂಸ್ಥೆ (ಐಪಿಸಿ) ಇತ್ತೀಚೆಗಷ್ಟೇ ಪಿಸಿಐಯನ್ನು ಅಮಾನತುಗೊಳಿಸಿತ್ತು. ಇದರ ಬೆನ್ನಲ್ಲೇ ಪಿಸಿಐಗೆ ಶೋಕಾಸ್ ನೋಟಿಸ್ ನೀಡಿದ್ದ ಕೇಂದ್ರ ಕ್ರೀಡಾ ಸಚಿವಾಲಯ, ಈ ಬಗ್ಗೆ ವಿವರಣೆ ನೀಡಬೇಕೆಂದು ಸೂಚಿಸಿತ್ತಲ್ಲದೆ, ಪಿಸಿಐನ ಮಾನ್ಯತೆ ರದ್ದುಗೊಳಿಸುವ ಬಗ್ಗೆಯೂ ಪ್ರಸ್ತಾಪಿಸಿತ್ತು.
ಇದೀಗ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕ್ರೀಡಾ ಇಲಾಖೆ, ಪಿಸಿಐಯನ್ನು
ಅಮಾನತುಗೊಳಿಸಿದೆಯಲ್ಲದೇ, ಭಾರತೀಯ ಕ್ರೀಡಾ ಇಲಾಖೆ, ಪಿಸಿಐಯನ್ನು ಅಮಾನತುಗೊಳಿಸಿದೆಯಲ್ಲದೇ, ಭಾರತೀಯ ಕ್ರೀಡಾ ಒಕ್ಕೂಟ(ಎನ್ಎಸ್ಎಫ್)ದ ಮಾನ್ಯತೆಯನ್ನೂ ರದ್ದುಗೊಳಿಸಿದೆ.
ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಕ್ರೀಡಾ ಇಲಾಖೆ, ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಗಾಜಿಯಾಬಾದ್‍ನಲ್ಲಿ ಆಯೋಜಿಸಲಾಗಿದ್ದ 15ನೇ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಯೋಜಕರ ಬೇಜವಾಬ್ದಾರಿ ಎದ್ದು ಕಾಣುತ್ತಿತ್ತು. ಅಥ್ಲೀಟ್‍ಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ಆಯೋಜಕರು ವಿಫಲರಾಗಿದ್ದರು. ಈ ಮೂಲಕ ಭಾರತೀಯ ಪ್ಯಾರಾಲಿಂಪಿಕ್ಸ್ ಸಂಸ್ಥೆ ಮಾನ್ಯತೆ ಪಡೆಯಲು ಅನುಸರಿಸಬೇಕಾದ ನೀತಿ ನಿಯಮವನ್ನು ಅಲ್ಲದೆ ತನ್ನ ಈ ಹಿಂದಿನ ಸಂವಿಧಾನವನ್ನು ಪಿಸಿಐ ಉಲ್ಲಂಘಿಸಿದೆ.
ವಿಕಲಚೇತನರ ಕ್ರೀಡೆಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದ್ದ ಪ್ಯಾರಾಲಿಂಪಿಕ್ಸ್ ಸಂಸ್ಥೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ, ಪಿಸಿಐಯನ್ನು ಅಮಾನತುಗೊಳಿಸುವ ನಿರ್ಧಾರ ಕೈಗೊಳ್ಳಬೇಕಾಯಿತು
ಎಂದು ಕೇಂದ್ರ ಕ್ರೀಡಾ ಇಲಾಖೆ ತಿಳಿಸಿದೆ.