ವಿವಾದದಲ್ಲಿ ಬ್ಯಾಡ್ಮಿಂಟನ್ ಲೀಗ್ 
ಕ್ರೀಡೆ

ಐಬಿಎಲ್, ಬಿಎಐ ಜಗಳ ಕೋರ್ಟ್ ಅಂಗಳಕ್ಕೆ?

ಭಾರೀ ನಿರೀಕ್ಷೆಗಳೊಂದಿಗೆ ಕಳೆದ ವರ್ಷ ಆರಂಭಗೊಂಡಿದ್ದ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ವಿವಾದಕ್ಕೆ ಸಿಲುಕಿದೆ...

ನವದೆಹಲಿ: ಭಾರೀ ನಿರೀಕ್ಷೆಗಳೊಂದಿಗೆ ಕಳೆದ ವರ್ಷ ಆರಂಭಗೊಂಡಿದ್ದ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ವಿವಾದಕ್ಕೆ ಸಿಲುಕಿದೆ.

ಐಬಿಎಲ್‍ನ ಪ್ರವರ್ತಕರಾದ `ಸ್ಪೋರ್ಟ್ಸ್ ಸಲ್ಯೂಷನ್ಸ್ ಸಂಸ್ಥೆ (ಎಸ್ ಎಸ್‍ಪಿಎಲ್)' ಜೊತೆಗಿನ ಒಪ್ಪಂದವನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ರದ್ದುಗೊಳಿಸಿದ್ದು, ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಂಸ್ಥೆ ನಿರ್ಧರಿಸಿದೆ.

ಒಪ್ಪಂದ ರದ್ದುಪಡಿಸಿರುವುದು ಕಾನೂನು ಬಾಹಿರ ನಿರ್ಧಾರ ಎಂದಿರುವ ಎಸ್‍ಎಸ್‍ಪಿಎಲ್, ಈ ಕುರಿತಂತೆ ಬಹಿರಂಗವಾಗಿ ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರಕಟಣೆಯನ್ನೂ ಹೊರಡಿಸಿರುವ ಅದು, `ಮುಂದಿನ 10 ವರ್ಷಗಳವರೆಗೆ ಭಾರತದಲ್ಲಿ ಅಬಾಧಿತವಾಗಿ ಐಬಿಎಲ್ ಪಂದ್ಯಾವಳಿ ನಡೆಸುವ ಬಗ್ಗೆ ಬಿಎಐ ಹಾಗೂ ಎಸ್‍ಎಸ್‍ಪಿಎಲ್ ನಡುವೆ ಒಪ್ಪಂದವಾಗಿತ್ತು. ಮಹಾರಾಷ್ಟ್ರ ಬ್ಯಾಡ್ಮಿಂಟನ್ ಸಂಸ್ಥೆಯೂ ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಇದೀಗ, ಒಪ್ಪಂದವನ್ನು ರದ್ದುಗೊಳಿಸಿರುವುದು ಐಬಿಎಲ್‍ನ ಕಾನೂನಿಗೆ ವಿರುದ್ಧ. ಸದ್ಯಕ್ಕೆ ಪ್ರಕರಣವನ್ನು ಕಾನೂನು ತಜ್ಞರ ಅವಗಾಹನೆಗೆ ತರಲಾಗಿದ್ದು, ಶೀಘ್ರವೇ ಬಿಎಐ ಹಾಗೂ ಮಹಾರಾಷ್ಟ್ರ ಬ್ಯಾಡ್ಮಿಂಟನ್ ಸಂಸ್ಥೆ ವಿರುದ್ಧ ದಾವೆ ಹೂಡುತ್ತೇವೆ' ಎಂದು ಕಂಪನಿ ಹೇಳಿದೆ. ಸಂಧಾನಕ್ಕೂ ವೇದಿಕೆ: ನ್ಯಾಯಾಲಯದ ಕದ ತಟ್ಟುವ ಮುನ್ನ, ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಲೂ ಸಂಸ್ಥೆ ಯೋಚಿಸಿದೆ. ಐಬಿಎಲ್‍ನ ಎಲ್ಲಾ ಫ್ರಾಂಚೈಸಿಗಳು, ಆಟಗಾರರೊಂದಿಗೆ ಚರ್ಚಿಸಿ, ಮುಂದಿನ ಕೈಗೊಳ್ಳಬೇಕಾದ ಕ್ರಮಗಳನ್ನು ನಿರ್ಧರಿಸುತ್ತದೆ ಎಂದು ಸಂಸ್ಥೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!