ಕ್ರೀಡೆ

ಭಾರತದಲ್ಲಿ ಶೇ.5 ರಷ್ಟು ಡೋಪಿಂಗ್

Srinivas Rao BV

ನವದೆಹಲಿ: ವಿಶ್ವದಾದ್ಯಂತ ಬಿಸಿಬಿಸಿ ಚರ್ಚೆಗೆ ಕಾರಣವಾಗಿರುವ ವಿಶ್ವ ಅಥ್ಲೀಟ್‍ಗಳ ಉದ್ದೀಪನಾ ಮದ್ದು ಸೇವನೆ ವಿಚಾರ, ಈಗ ಭಾರತದತ್ತಲೂ ಬೆರಳು ಮಾಡಿದೆ.

ಭಾರತದ ಒಟ್ಟಾರೆ ಅಥ್ಲೀಟ್ ಗಳಲ್ಲಿ ಶೇ. 5ರಷ್ಟು ಅಥ್ಲೀಟ್‍ಗಳು ಉದ್ದೀಪನಾ ಮದ್ದಿಗೆ ದಾಸರಾಗಿದ್ದಾರೆಂಬ ಗಂಭಿರ ಮಾಹಿತಿ ಬಹಿರಂಗವಾಗಿದೆ ಎಂದು ಖಾಸಗಿ ಮಾಧ್ಯಮವೊಂದು  ವರದಿ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ, 5000 ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಸುಮಾರು 12  ಸಾವಿರ ಅಥ್ಲೀಟ್‍ಗಳಿಂದ ರಕ್ತದ ಮಾದರಿಯನ್ನು ಅಂತಾರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ದಳ ಪರೀಕ್ಷೆಗಾಗಿ ಪಡೆದಿತ್ತು. ಇವುಗಳ ಪರೀಕ್ಷೆ ಯನ್ನು ನಡೆಸಿದ್ದ ಸಂಸ್ಥೆ ಅದನ್ನು ಗೌಪ್ಯವಾಗಿರಿಸಿತ್ತು.

ಆದರೆ, ಎರಡು ದಿನಗಳ ಹಿಂದೆ ಈ ಪರೀಕ್ಷಾ ವರದಿಗಳು ಸೋರಿಕೆಯಾಗಿ  ಅವು, ಮಾಧ್ಯಯಮಗಳಲ್ಲಿ ಪ್ರಕಟಗೊಂಡಿದ್ದವು. ಹೀಗೆ, ಸೋರಿಕೆಯಾದ ಮಾಹಿತಿಯ ಪ್ರಕಾರ, ಭಾರತವೂ ಉದ್ದೀಪನಾ ಮದ್ದಿನ ಕರಾಳ ಛಾಯೆಯಲ್ಲಿದೆ ಎಂಬ ಅಂಶ ಬಹಿರಂಗಗೊಂಡಿದೆ.

ಐಎಎಎಫ್ ದಿಗ್ಭ್ರಮೆ: ಮಾಧ್ಯಮ ವರದಿ ಮಾಡಿರುವಂತೆ  5,೦೦೦ ಅಥ್ಲೀಟ್‍ಗಳು ಉದ್ದೀಪನಾ ಮದ್ದು ಸೇವಿಸಿದ್ದಾರೆ ಎಂಬ ವರದಿಯ ದಿಗ್ಭ್ರಮೆ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ ಅಸೋಸಿಯೇಷನ್ಸ್ ಆಫ್ ಫೆಡರೇಷನ್ (ಐಎಎಎಫ್), ಡೋಪಿಂಗ್ ತಡೆಯುವಲ್ಲಿ ಐಎಎಎಎಫ್  ನಿರ್ಲಕ್ಷ್ಯ ವಹಿಸಿದೆ ಎಂಬುದೆಲ್ಲಾ ಶುದ್ಧ ಸುಳ್ಳು. ಪತ್ರಕರ್ತರಿಗೆ ತಪ್ಪು ಸಂದೇಶ ರವಾನೆಯಾಗಿದೆ ಎಂದು ತಿಳಿಸಿದೆಯಲ್ಲದೆ, ಒಟ್ಟಾರೆ ವರದಿಯೇ ಗೊಂದಲದಿಂದ ಕೂಡಿದೆ ಎಂದು ತಿಳಿಸಿದೆ.

SCROLL FOR NEXT