ಜಕಾರ್ತ್(ಇಂಡೋನೇಷ್ಯಾ): ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸಿಂಧು ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವ ಮಾಜಿ ನಂಬರ್‌ಒನ್ ಆಟಗಾರ್ತಿ ಚೀನಾದ ಲೀ ಕ್ಸುರೆಯಿ ಅವರ ಎದುರು ಪ್ರಯಾಸ ಗೆಲುವು ಕಂಡರು. 50 ನಿಮಿಷಗಳ ಹೋರಾಟದಲ್ಲಿ ಸಿಂಧು, 21–17, 14–21, 21–17ರಲ್ಲಿ ಲೀ ಅವರನ್ನು ಮಣಿಸಿದರು. ಟೂರ್ನಿಯಲ್ಲಿ 11ನೇ ಶ್ರೇಯಾಂಕ ಪಡೆದಿರುವ ಸಿಂಧು, ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಸುಂಗ್ ಜಿ ಹಯುನ್ ಅವರ ಜತೆ ಸೆಣೆಸಲಿದ್ದಾರೆ.
ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 47 ನಿಮಿಷಗಳ ಕಾಲ ಸೆಣೆಸಾಟದಲ್ಲಿ ಜಪಾನಿನ ಸಯಕ್ ತಕಹಶಿ ಅವರನ್ನು 21–18, 21–14ರಲ್ಲಿ ಮಣಿಸಿದರು. ಸೈನಾ ಅವರು ಮುಂದಿನ ಸುತ್ತಿನಲ್ಲಿ ವಾಂಗ್ ಯಿಹಾನ್ ಹಾಗೂ ಬೇ ಯೆಆನ್ ಜು ಅವರ ನಡುವಣ ಪಂದ್ಯದಲ್ಲಿ ಗೆಲ್ಲವು ಸ್ಪರ್ಧಿಯೊಂದಿಗೆ ಪೈಪೋಟಿ ನಡೆಸಲಿದ್ದಾರೆ.