ಶೆಬೊಯ್ಗನ್ : ಭಾರತದ ಪ್ರಮುಖ ಗಾಲ್ಫ್ ಆಟಗಾರ ಅನಿರ್ಬಾನ್ ಲಾಹಿರಿ ತಮ್ಮ ಉತ್ತಮ ಲಯವನ್ನುಮುಂದುವರಿಸುವ ಮೂಲಕ ಪಿಜಿಎ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಅಗ್ರ ಐದನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ಶ್ರೇಷ್ಠ ಸಾಧನೆ ಮಾಡಿದಮ ಭಾರತದ ಆಟಗಾರರಾಗಿದ್ದಾರೆ. ಸೋಮವಾರ ನಡೆದ ಸ್ಪರ್ಧೆಯಲ್ಲಿ ಲಾಹಿರಿ 5ನೇ ಸ್ಥಾನ ಪಡೆದರು . ಈ ಮೊದಲು ಬ್ರಿಟೀಷ್ ಓಪನ್ ಗಾಲ್ಫ್ ಟೂರ್ನಿಯಲ್ಲಿ ಶಿವ ಕಪೂರ್ 9ನೇ ಸ್ಥಾನ ಪಡೆದಿದ್ದರು. ಇನ್ನು 2008ರ ಪಿಜಿಎ ಚಾಂಪಿಯನ್‍ಶಿಪ್‍ನಲ್ಲಿ ಜೀವ್ ಮಿಲ್ಖಾ ಸಿಂಗ್ 9ನೇ ಸ್ಥಾನ ಪಡೆದಿದ್ದು, ಶ್ರೇಷ್ಠ ಸಾಧನೆಯಾಗಿತ್ತು. ಆರಂಭಿಕ ಮೂರು ಸುತ್ತುಗಳಲ್ಲಿ ಕ್ರಮವಾಗಿ 70-67-70 ಅಂಕಗಳನ್ನು ಸಂಪಾದಿಸಿದ್ದ ಲಾಹಿರಿ, ಅಂತಿಮ ಸುತ್ತಿನಲ್ಲೂ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದರು. ಈ ಮೂಲಕ 68 ಅಂಕಗಳನ್ನು ಕಲೆ ಹಾಕಿದರು. ದಿನದಾಟದ ಒಂದು ಹಂತದಲ್ಲಿ ಜಂಟಿ ಮೂರನೇ ಸ್ಥಾನದಲ್ಲಿದ್ದ ಲಾಹಿರಿ, ಅಂತಿಮವಾಗಿ 13ರ ಒಳಗೆ 275 ಅಂಕಗಳನ್ನು ಸಂಪಾದಿಸಿ ಜಂಟಿ ಐದನೇ ಸ್ಥಾನ ಪಡೆದರು. ಇದೇ ವರ್ಷ ಮೂರು ವಾರಗಳ ಅಂತರದಲ್ಲಿ ಲಾಹಿರಿ ಮಲೇಷ್ಯಾ ಓಪನ್ ಮತ್ತು ಹಿರೋ ಇಂಡಿಯನ್ ಓಪನ್ ಟೂರ್ನಿಯನ್ನು ಗೆದ್ದುಕೊಳ್ಳುವ ಮೂಲಕ ವಿಶ್ವ ಗಾಲ್ಫ್ ನಲ್ಲಿ ಗಮನ ಸೆಳೆದಿದ್ದರು. ಈಗ ಲಾಹಿರಿ ಅಕ್ಟೋಬರ್‍ನಲ್ಲಿ ಕೋರಿಯಾದ ಇಂಚಾನ್ನಲ್ಲಿ ನಡೆಯಲಿರುವ ಪ್ರೆಸಿಡೆಂಟ್ಸ್ ಕಪ್ ಟೂರ್ನಿಯ ಅಂತಾರಾಷ್ಟ್ರೀಯ ತಂಡದಲ್ಲಿ ಭಾಗವಹಿಸುವಸಾಧ್ಯತೆಗಳು ಹೆಚ್ಚಾಗಿವೆ. ಸ್ಪರ್ಧೆಯಲ್ಲಿ ತೀರಾ ಹಿಂದುಳಿದಿದ್ದೆ. ಹಾಗಾಗಿ ಈ ಸ್ಥಾನ ಪಡೆದಿರುವುದಕ್ಕೆ ಖುಷಿಯಾಗಿದೆ. ಈ ಫಲಿತಾಂಶದಿಂದ ಆತ್ಮ ವಿಶ್ವಾಸ ಹೆಚ್ಚಾಗಿದೆ. ಅಂತಿಮ ದಿನ ಹೆಚ್ಚು ಪರಿಶ್ರಮ ಹಾಕಿದ್ದೆ. ಅಂಕವನ್ನು ಗಳಿಸುವ ಅಂಶದಲ್ಲಿ ಇನ್ನು ಸುಧಾರಣೆ ಕಾಣಬೇಕಿದೆ. ಈ ವಿಭಾಗವನ್ನು ಸರಿಪಡಿಸಿಕೊಂಡರೆ, ಇನ್ನು ಉತ್ತಮ ಫಲಿತಾಂಶ ಪಡೆಯಬಹುದು ಎಂದು ಲಾಹಿರಿ ತಿಳಿಸಿದ್ದಾರೆ.
ಲಾಹಿರಿಗೆ ಏಷ್ಯನ್ ಟೂರ್ ಅಭಿನಂದನೆ: ಲಹಿರಿ ಅವರ ಈ ಸಾಧನೆಗೆ ಏಷ್ಯನ್ ಟೂರ್‍ನ ಮುಖ್ಯಸ್ಥ ಕೈಹ್ಲಾ ಹಾನ್ ಸೋಮವಾರ ಅಭಿನಂದನೆ ಸಲ್ಲಿಸಿದ್ದಾರೆ.ಈ ಸಾಧನೆಯಿಂದ ಹೊಸ ತಲೆಮಾರಿಗೆ ಸ್ಫೂರ್ತಿ ಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನಿರ್ಬಾನ್ ತಮ್ಮ ಅತ್ಯುತ್ತಮ ಪ್ರತಿಭಾವಂತ ಆಟಗಾರ. ಇತ್ತೀಚೆಗೆ ನಡೆದ ಏಷ್ಯನ್ ಟೂರ್ ಗಳಲ್ಲಿಬೆಳಕಿಗೆ ಬಂದಿರುವ ಲಹಿರಿ, 2008ರಿಂದ ಇವರೆಗೆ ತಮ್ಮ ವೃತ್ತಿ ಜೀವನದಲ್ಲಿ ಕ್ರಮೇಣ ಪ್ರಗತಿಸಾಧಿಸಿರುವುದನ್ನು ಕಂಡಿದ್ದೇವೆ. ಅವರ ಈ ಯಶಸ್ಸಿನಿಂದ ಸಂತೋಷವಾಗಿದೆ. ಕಳೆದ ಮೂರುಋತುವಿನಲ್ಲಿ ಲಾಹಿರಿ ಕ್ರಮವಾಗಿ 10, 3 ಹಾಗೂ2ನೇ ಸ್ಥಾನ ಪಡೆದಿದ್ದಾರೆ. ಇನ್ನು ಪ್ರಸಕ್ತ ಸಾಲಿನಲ್ಲಿಏಷ್ಯಾದ ಪ್ರಮುಖ ಗಾಲ್ಫರ್ ಆಗಿ ಹೊರಹೊಮ್ಮಿದ್ದಾರೆ ಎಂದರು.ಅನಿರ್ಬಾನ್ ಅಂತಾರಾಷ್ಟ್ರೀಯ ಮಟ್ಟದಲ್ಲಿಇನ್ನಷ್ಟು ಯಶಸ್ಸು ದಾಖಲಿಸಲಿದ್ದಾರೆ. ಅವರು ಪ್ರಮುಖ ಟೂರ್ನಿಯನ್ನು ಗೆಲ್ಲುವ ಪ್ರತಿಭೆಆತ್ಮವಿಶ್ವಾಸ ಇದೆ ಎಂದು ಅಭಿಪ್ರಾಯಪಟ್ಟರು
ವಿಶ್ವ ರ್ಯಾಂಕಿಂಗ್‍ನಲ್ಲಿ ಏರಿಕೆ
ಪಿಜಿಎ ಚಾಂಪಿಯನ್‍ಶಿಪ್ ನಂತರ ಅನಿರ್ಬಾನ್ ಲಾಹಿರಿ ವಿಶ್ವ ಗಾಲ್ಫ್ ರ್ಯಾಂಕಿಂಗ್‍ನಲ್ಲಿ 15ಸ್ಥಾನಗಳ ಏರಿಕೆ ಕಂಡಿದ್ದು, 38ನೇ ಸ್ಥಾನ ಪಡೆದಿದ್ದಾರೆ. ಆಮೂಲಕ ಮತ್ತೆ ಅಗ್ರ 40ರಲ್ಲಿ
ಕಾಣಿಸಿಕೊಂಡಿದ್ದಾರೆ. ಈ ವಾರದ ಆರಂಭದಲ್ಲಿ 53ನೇ ಸ್ಥಾನದಲ್ಲಿದ್ದ ಲಾಹಿರಿ, ಪಿಜಿಎಚಾಂಪಿಯನ್‍ಶಿಪ್ ಮುಕ್ತಾಯದ ನಂತರ 38ನೇ ಸ್ಥಾಕ್ಕೆ ಜಿಗಿದಿದ್ದಾರೆ. ಲಾಹಿರಿ ವೃತ್ತಿ ಜೀವನದ ಶ್ರೇಷ್ಠ ರ್ಯಾಂಕಿಂಗ್ 33ನೇ ಸ್ಥಾನವಾಗಿದೆ. ಪ್ರೆಸಿಡೆಂಟ್ಸ್ ಕಪ್ ರ್ಯಾಂಕಿಂಗ್‍ನಲ್ಲಿ 7ನೇ ಸ್ಥಾನಕ್ಕೆ ಬಡ್ತಿಪಡೆದಿರುವ ಲಾಹಿರಿ, ಟೂರ್ನಿಯಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವಸಾಧ್ಯತೆಗಳು ಹೆಚ್ಚಾಗಿವೆ. ಈ ತಂಡವನ್ನು ಸೆಪ್ಟೆಂಬರ್ 8ರಂದು ಆಯ್ಕೆ ಮಾಡಲಾಗುವುದು.