ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್ (ಚಿತ್ರ ಕೃಪೆ: ಬಿಸಿಸಿಐ) 
ಕ್ರೀಡೆ

ಎರಡನೇ ಬಾರಿಗೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ದಿನೇಶ್ ಕಾರ್ತಿಕ್

ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಎರಡನೇ ಬಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮಂಗಳವಾರ ಖ್ಯಾತ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿದ್ದಾರೆ...

ಚೆನ್ನೈ: ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ಎರಡನೇ ಬಾರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಮಂಗಳವಾರ ಖ್ಯಾತ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿದ್ದಾರೆ.

ಮಂಗಳವಾರ ಚೆನ್ನೈನ ಚರ್ಚ್ ನಲ್ಲಿ ನಡೆದ ಸಮಾರಂಭದಲ್ಲಿ ಕ್ರೈಸ್ತ ಧರ್ಮದ ಪದ್ಧತಿಯಂತೆ ದಿನೇಶ್ ಕಾರ್ತಿಕ್ ತಮ್ಮ ಬಹುದಿನದ ಗೆಳತಿ ಮತ್ತು ಖ್ಯಾತ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾಗಿದ್ದಾರೆ. ವಿಶೇಷವೆಂದರೆ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್ ಅವರ ವಿವಾಹ ಎರಡು ಸಂಪ್ರದಾಯದಂತೆ ನಡೆಯಲಿದ್ದು, ಮಂಗಳವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದಿದೆ.

ದೀಪಿಕಾ ಪಳ್ಳಿಕಲ್ ಕ್ರೈಸ್ತ ಕುಟುಂಬದಿಂದ ಬಂದಿರುವುದರಿಂದ ಮದುವೆ ಆರಂಭದಲ್ಲಿ ಕ್ರೈಸ್ತ ಸಂಪ್ರದಾಯದಂತೆ ನಡೆದಿದ್ದು, ದಿನೇಶ್ ಕಾರ್ತಿಕ್ ಹಿಂದೂ ಧರ್ಮದವರಾದ್ದರಿಂದ ಗುರುವಾರ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇದೇ ಗುರುವಾರ ಹಿಂದೂ ಸಂಪ್ರದಾಯದಂತೆ ದಂಪತಿಗಳು ಮದುವೆಯಾಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕ್ರಿಕೆಟ್ ಆಟಗಾರ ದಿನೇಶ್ ಕಾರ್ತಿಕ್ ಈ ಹಿಂದೆಯೇ ಅಂದರೆ 2007ರಲ್ಲಿ ವಿವಾಹವಾಗಿದ್ದರು. ಕಾರ್ತಿಕ್ ತಮ್ಮ ಬಾಲ್ಯದ ಗೆಳತಿ ನಿಕಿತಾ ಅವರೊಂದಿಗೆ ಹೊಸ ಬದುಕನ್ನು ಆರಂಭಿಸಿದ್ದರು. ಆದರೆ ಕೌಟುಂಬಿಕ ಮತ್ತು ವೈಯುಕ್ತಿಕ ಕಾರಣಗಳಿಂದಾಗಿ ಈ ಸಂಬಂಧ ಹೆಚ್ಚು ಕಾಲ ಉಳಿಯದೆ ವಿಚ್ಛೇದನದಲ್ಲಿ ಅಂತ್ಯವಾಗಿತ್ತು. ಬಳಿಕ ನಿಕಿತಾ ಅವರು ಭಾರತದ ಟೆಸ್ಟ್ ಕ್ರಿಕೆಟ್ ಆಟಗಾರ ಮುರಳಿ ವಿಜಯ್ ಅವರನ್ನು ವಿವಾಹವಾದರು.

2013ರಲ್ಲಿ ಕಾರ್ತಿಕ್ ಗೆ ದೀಪಿಕಾ ಅವರ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಇದೀಗ ಇಬ್ಬರೂ ಆಟಗಾರರು ಮದುವೆಯಾಗುವ ಮೂಲಕ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?