ಗೀತಾ ಬಸ್ರಾ ಜತೆ ಹರ್ಭಜನ್ ಸಿಂಗ್ 
ಕ್ರೀಡೆ

ಅಕ್ಟೋಬರ್‌ನಲ್ಲಿ ಹರ್ಭಜನ್ ಸಿಂಗ್- ಗೀತಾ ಬಸ್ರಾ ಮದುವೆ

ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಪ್ರೇಯಸಿ ಗೀತಾ ಬಸ್ರಾ ಅವರನ್ನು ಮದುವೆಯಾಗಲಿದ್ದಾರೆ. ಅಕ್ಟೋಬರ್ 29ರಂದು ಜಲಂಧರ್ ...

ನವದೆಹಲಿ: ಟೀಂ ಇಂಡಿಯಾದ ಖ್ಯಾತ ಸ್ಪಿನ್ನರ್ ಹರ್ಭಜನ್ ಸಿಂಗ್ ತನ್ನ ಪ್ರೇಯಸಿ ಗೀತಾ ಬಸ್ರಾ ಅವರನ್ನು ಮದುವೆಯಾಗಲಿದ್ದಾರೆ. ಅಕ್ಟೋಬರ್ 29ರಂದು ಜಲಂಧರ್ ನಿಂದ 20 ಕಿಮೀ ದೂರದಲ್ಲಿರುವ ಪಗ್‌ವಾರಾದಲ್ಲಿ ಹರ್ಭಜನ್ -ಗೀತಾ ಮದುವೆ ನಡೆಯಲಿದೆ ಎಂದು ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.

ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯವನ್ನಾಡಲು ಹರ್ಭಜನ್‌ಗೆ ಅವಕಾಶ ಸಿಕ್ಕಿದರೆ ಮದುವೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಯಾರು ಈ ಗೀತಾ ಬಸ್ರಾ?: ಬಾಲಿವುಡ್ ನಟಿ ಗೀತಾ ಬಸ್ರಾ ಹಲವಾರು ವರ್ಷಗಳಿಂದ ಹರ್ಭಜನ್ ಸಿಂಗ್‌ನ ಗೆಳತಿಯಾಗಿದ್ದಾಳೆ. ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಎಂದು ಇವರಿಬ್ಬರೂ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಆಗಾಗ್ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದದ್ದು ವದಂತಿಗಳಿಗೆ ಕಾರಣವಾಗಿತ್ತು. ಗೀತಾ ಬಸ್ರಾ ಅವರ ನೂತನ ಚಿತ್ರ ಸೆಕೆಂಡ್ ಹ್ಯಾಂಡ್ ಹಸ್ಪೆಂಡ್‌ನಲ್ಲಿ ಹರ್ಭಜನ್ ಸಿಂಗ್ ಕೂಡಾ ಕಾಣಿಸಿಕೊಂಡಿದ್ದರು.

ಈ ಬಗ್ಗೆ ಬಸ್ರಾ ಅವರಲ್ಲಿ ಕೇಳಿದಾಗ ಹಾಗೇನೂ ಇಲ್ಲ, ನಾನು ಮದುವೆಯಾಗುತ್ತಿದ್ದರೆ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ. ಕದ್ದು ಮುಚ್ಚಿ ಮದುವೆಯಾಗಲ್ಲ. ಪಂಜಾಬಿ ಹುಡುಗಿ ನಾನು ಮದುವೆಯಾಗುವುದಾದರೆ ಅದ್ಧೂರಿಯಾಗಿಯೇ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಳು.

ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಸಿಂಗ್ ವಾಪಸ್  ಬಂದ ನಂತರವೇ ಆಮಂತ್ರಣ ಪತ್ರಿಕೆ ಮತ್ತು ಇನ್ನಿತರ ತಯಾರಿಗಳನ್ನು ಮಾಡಿಕೊಳ್ಳಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!