ಕೊಲಂಬೊ: ಶ್ರೀಲಂಕಾ ತಂಡದ ಮೊದಲ ಇನಿಂಗ್ಸ್ ವೇಳೆ ಲಾಹಿರು ತಿರಿಮಾನೆ ಹಾಗೂ ದಿನೇಶ್ ಚಾಂಡೀಮಾಲ್ ಅವರನ್ನು ರೇಗಿಸಲು ಯತ್ನಿಸಿದ ಕಾರಣಕ್ಕಾಗಿ ಇಶಾಂತ್ ಶರ್ಮಾ ಅವರಿಗೆ ದ್ವಿತೀಯ ಟೆಸ್ಟ್ ಪಂದ್ಯದ ಸಂಭಾವನೆಯಲ್ಲಿ ಶೇ. 65ರಷ್ಟು ಮೊತ್ತವನ್ನು ದಂಡವಾಗಿ ಪಾವತಿಸುವಂತೆ ಐಸಿಸಿ ಆದೇಶಿಸಿದೆ.
ಇನಿಂಗ್ಸ್ ನ 85ನೇ ಓವರ್‍ನಲ್ಲಿ ತಿರಿಮಾನೆ ಅವರ ವಿಕೆಟ್ ಪಡೆದ ಇಶಾಂಶ್, ತಕ್ಷಣವೇ ಅವರನ್ನು ರೇಗಿಸಿದರು. ಈ ಕಾರಣಕ್ಕಾಗಿ, ಇಶಾಂತ್ ಸಂಭಾವನೆಯಲ್ಲಿ ಶೇ. 16ರಷ್ಟು ದಂಡ ವಿಧಿಸಲಾಗಿದೆ. ಇದಾಗಿ ಮೂರು ಓವರ್ ನಂತರ ಚಾಂಡೀಮಾಲ್ ವಿಕೆಟ್ ಕಬಳಿಸಿದಾಗಲೂ ಇದೇ ರೀತಿ ಇಶಾಂತ್ ವರ್ತಿಸಿದ್ದಕ್ಕಾಗಿ ಅವರಿಗೆ ಶೇ. 50ರಷ್ಟು ದಂಡವನ್ನು (ಒಟ್ಟು ಶೇ. 65) ನೀಡುವಂತೆ ಐಸಿಸಿ ಆದೇಶಿಸಿದೆ.