ಸಾನಿಯಾ ಮತ್ತು ಹಿಂಗಿಸ್ ಜೋಡಿ 
ಕ್ರೀಡೆ

ಸಿನ್ಸಿನಾಟಿ ಓಪನ್: ಸಾನಿಯಾ ಜೋಡಿ ಹೋರಾಟ ಅಂತ್ಯ

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ಜತೆಗಾರ್ತಿ ಮಾರ್ಟಿನಾ ಹಿಂಗಿಸ್ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ...

ಸಿನ್ಸಿನಾಟಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ ಜತೆಗಾರ್ತಿ ಮಾರ್ಟಿನಾ ಹಿಂಗಿಸ್ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯಲ್ಲಿ ತಮ್ಮ ಹೋರಾಟ  ಅಂತ್ಯಗೊಳಿಸಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಉಪಾಂತ್ಯದ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗೀಸ್ ಜೋಡಿಯು ತಮ್ಮ ಪ್ರತಿಸ್ಪರ್ಧಿ ಚೈನೀಸ್ ಥೈಪೇನ  ಸಹೋರದರಿಯರಾದ ಹಾ ಚಿಂಗ್ ಚಾನ್ ಮತ್ತು ಯಂಗ್ ಜನ್ ಚಾನ್ ವಿರುದ್ಧ 46, 60, 610 ಸೆಟ್‍ಗಳ ಅಂತರದಲ್ಲಿ ಪರಾಭವಗೊಂಡಿತು. ಒಂದು ಗಂಟೆ 14 ನಿಮಿಷಗಳ ಕಾಲ ನಡೆದ  ಪಂದ್ಯದಲ್ಲಿ ಸಾನಿಯಾ ಜೋಡಿ ನಿರೀಕ್ಷಿತ ಮಟ್ಟದ ಆರಂಭ ಪಡೆಯಲಿಲ್ಲ.

ಆರಂಭಿಕ ಸೆಟ್‍ನಲ್ಲಿ ಥೈಪೇ ಸಹೋದರಿಯರ ವಿರುದ್ಧ 46 ರ ಹಿನ್ನಡೆ ಅನುಭವಿಸಿತ್ತು. ನಂತರ ಎರಡನೇ ಸೆಟ್‍ನಲ್ಲಿ ಮತ್ತೆ ತಮ್ಮ ಅಬ್ಬರದ ಆಟ ಪ್ರದರ್ಶಿಸಿದ ಇಂಡೊ ಸ್ವಿಸ್ ಜೋಡಿ ಎದುರಾಳಿ  ಜೋಡಿಗೆ ಅವಕಾಶ ನೀಡದೇ ಸೆಟ್ ಅನ್ನು 60ಯಿಂದ ಕ್ಲೀನ್‍ಸ್ವೀಪ್ ಮಾಡಿಕೊಂಡಿತ್ತು. ಎರಡು ಸೆಟ್‍ಗಳ ನಂತರ ಉಭಯ ಜೋಡಿಗಳು ಸಮಬಲ ಸಾಧಿಸಿದ್ದರಿಂದ ಮೂರನೇ ಸೆಟ್ ಸಾಕಷ್ಟು ರೋಚಕವಾಗಿತ್ತು.

ಆದರೆ ಮತ್ತೆ ಸಾನಿಯಾ ಹಾಗೂ ಹಿಂಗಿಸ್ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಥೈಪೇ ಸಹೋದರಿಯರು ಪಂದ್ಯವನ್ನು ಗೆದ್ದುಕೊಂಡರು. ಈ ಮೂಲಕ ಸಾನಿಯಾ ಜೋಡಿ ಈ  ಟೂರ್ನಿಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದರು. ಈ ಟೂರ್ನಿ ಇದೇ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಯು.ಎಸ್ ಓಪನ್ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಗೆ ವೇದಿಕೆಯಾಗಿ ಬಿಂಬಿತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ