ಕ್ರೀಡೆ

ಡೋಪಿಂಗ್: ಸಿಕ್ಕಿಬಿದ್ದ ಕೀನ್ಯಾ ಅಥ್ಲೀಟ್‍ಗಳು

Srinivasamurthy VN

ಬೀಜಿಂಗ್: ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಇಬ್ಬರು ಕೀನ್ಯಾ ಅಥ್ಲೀಟ್‍ಗಳು ಡೋಪಿಂಗ್ ನಡೆಸಿ ಸಿಕ್ಕಿಬಿದ್ದಿದ್ದು ಅವರನ್ನೀಗ ಅಮಾನತುಗೊಳಿಸಲಾಗಿದೆ.

ಅಥ್ಲೀಟ್‍ಗಳು ಉಳಿದುಕೊಂಡಿದ್ದ ಟೀಂ ಹೋಟೆಲ್‍ನಲ್ಲಿ ಇದೇ ತಿಂಗಳು 20 ಹಾಗೂ 21ರಂದು ನಡೆದಿದ್ದ ಉದ್ದೀಪನಾ ಮದ್ದು ಪರೀಕ್ಷೆಯ ವೇಳೆ 21 ವರ್ಷದ ಕೊಕಿ ಮಾನುಂಗ ಹಾಗೂ 29 ವರ್ಷದ ಜಾಯ್ಸಿ ಝಕಾರಿ ಎಂಬುವರ ರಕ್ತ ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ಇದೀಗ ಪರೀಕ್ಷಾ ವರದಿ ಬಂದು ಈ ಈರ್ವರೂ ನಿಯಮ ಉಲ್ಲಂಘಿಸಿದ್ದುದು ಖಚಿತವಾಗಿತ್ತು ಎಂದು ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್ (ಐಎಎಎಫ್) ತಿಳಿಸಿದೆ.

400 ಮೀ.ನಲ್ಲಿ ಚಿನ್ನ ಗೆದ್ದ ವ್ಯಾನ್ ನಿಕೆರ್ಕ್
ಪುರುಷರ 400 ಮೀ. ಓಟದ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ವೇಡ್ ವ್ಯಾನ್ ನಿಕೆರ್ಕ್ ಚಿನ್ನದ ಗೌರವಕ್ಕೆ ಪಾತ್ರರಾದರು. ನಿಗದಿತ ದೂರವನ್ನು 43.48 ಸೆಕೆಂಡ್‍ಗಳಲ್ಲಿ ಕ್ರಮಿಸಿದ  ವರು, ತಮ್ಮ ವೃತ್ತಿಜೀವನದ ಮೊದಲ ಚಿನ್ನದ ಪದಕ ಗೆದ್ದರಲ್ಲದೆ, ಅಥ್ಲೆಟಿಕ್ಸ್ ಓಟದ ಇತಿಹಾಸದಲ್ಲಿ ವಿಶ್ವದ ನಾಲ್ಕನೇ ವೇಗದ ಓಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು.

SCROLL FOR NEXT