ಭಾರತದ ಆಟಗಾರ ವಿರಾಟ್ ಕೊಹ್ಲಿ 
ಕ್ರೀಡೆ

3ನೇ ಟೆಸ್ಟ್: ಫೈನಲ್ ಹಣಾಹಣಿಗೆ ಭಾರತ-ಶ್ರೀಲಂಕಾ ಸಜ್ಜು

ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವಣದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರದಿಂದ ಆರಂಭವಾಗುತ್ತಿದ್ದು, ಉಭಯರ ಕಣ್ಣು ಸರಣಿ ಮೇಲೆ ನಾಟಿದೆ. ಈಗಾಗಲೇ ಮೂರು ಟೆಸ್ಟ್ ಪಂದ್ಯ ಸರಣಿ 1-1ರಿಂದ...

ಕೊಲಂಬೊ: ಪ್ರವಾಸಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ನಡುವಣದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರದಿಂದ ಆರಂಭವಾಗುತ್ತಿದ್ದು, ಉಭಯರ ಕಣ್ಣು
ಸರಣಿ ಮೇಲೆ ನಾಟಿದೆ. ಈಗಾಗಲೇ ಮೂರು ಟೆಸ್ಟ್ ಪಂದ್ಯ ಸರಣಿ 1-1ರಿಂದ ಸಮಬಲ ಸಾಧಿಸಿರುವ ಹಿನ್ನೆಲೆಯಲ್ಲಿ ಈ ಕೊನೆಯ ಟೆಸ್ಟ್ ಪಂದ್ಯ ಈರ್ವರಿಗೂ `ಫೈನಲ್' ಹಣಾಹಣಿಯಾಗಿ ಮಾರ್ಪಟ್ಟಿದೆ.

ಕೌತುಕ ಹಾಗೂ ರೋಚಕತೆ ಮೂಡಿಸಿದ್ದ ಗಾಲೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಭಾರತದ ವಿರುದಟಛಿ 63 ರನ್‍ಗಳ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿದರಾದರೂ, ಕೊಲಂಬೋ ಟೆಸ್ಟ್ ನಲ್ಲಿ ಭಾರತ ಪ್ರಬಲವಾಗಿ ತಿರುಗಿಬಿದ್ದಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅಬ್ಬರದ ಪ್ರದರ್ಶನ ನೀಡಿದ ಪ್ರವಾಸಿ ತಂಡ, ಆತಿಥೇಯರ ವಿರುದ್ಧ 278 ರನ್ ಗಳಂತಹ ಭಾರೀ ಗೆಲುವು ಸಾಧಿಸಿ ಸರಣಿಯನ್ನು ಸಮ ಮಾಡಿಕೊಂಡಿತ್ತು. ಈ ಗೆಲುವು ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಲ್ಲಿ ಸಿಕ್ಕ ಮೊದಲ ಜಯವಾಗಿತ್ತು.

ಇದೀಗ ಅವರಿಗೆ ಸರಣಿಯನ್ನು ಜಯಿಸಿ ಚರಿತ್ರೆ ನಿರ್ಮಿಸುವ ದಾಹ ಹೆಚ್ಚಾಗಿದೆ. ಈ ದಿಸೆಯಲ್ಲಿ ಮೂರನೇ ಟೆಸ್ಟ್ ಪಂದ್ಯವು ಈರ್ವರ ಪಾಲಿಗೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಫಲಿಸಿದ ತಂತ್ರ ಸರಣಿಗೂ ಮುನ್ನ ಐವರು ಬೌಲರ್‍ಗಳ ಪ್ರಯೋಗ ನಡೆಸಲಾಗುವುದು ಎಂದು ತಿಳಿಸಿದ್ದ ಕೊಹ್ಲಿ ಅದರಂತೆಯೇ ನಡೆದುಕೊಂಡಿದ್ದರು. ಆದರೆ ಗಾಲೆ ಟೆಸ್ಟ್ ನಲ್ಲಿ ಈ ತಂತ್ರ ಕೈಕೊಟ್ಟಿತ್ತು. ಹಾಗೆಂದ ಮಾತ್ರಕ್ಕೆ ಧೃತಿಗೆಡದ ಕೊಹ್ಲಿ ಹಾಗೂ ಟೀಂ ನಿರ್ದೇಶಕ ರವಿಶಾಸ್ತ್ರಿ ಈ ತಂತ್ರವನ್ನೇ ನೆಚ್ಚಿಕೊಂಡು ಎರಡನೇ ಟೆಸ್ಟ್‍ನಲ್ಲಿ ಭರ್ಜರಿ ಜಯ ಸಾಧಿಸಿದ್ದರು. ಇಲ್ಲೀವರೆಗಿನ ಎರಡು ಟೆಸ್ಟ್ ಪಂದ್ಯಗಳಲ್ಲಿ 40 ವಿಕೆಟ್‍ಗಳನ್ನು ಗಳಿಸಿದ್ದು ಈ ಪೈಕಿ ರವಿಚಂದ್ರನ್ ಅಶ್ವಿನ್ 4 ಇನ್ನಿಂಗ್ಸ್‍ಗಳಲ್ಲಿ 17 ವಿಕೆಟ್‍ಗಳನ್ನು ಗಳಿಸಿ ಲಂಕಾಗೆ ಭಾರೀ ಆತಂಕಿತರಾಗಿದ್ದಾರೆ. ಇನ್ನು ಬ್ಯಾಟಿಂಗ್ ನಲ್ಲಂತೂ ಭಾರತ ದಿಟ್ಟ ಪ್ರದರ್ಶನ ನೀಡಿದೆ.

ನಾಯಕ ಕೊಹ್ಲಿಯನ್ನೂ ಒಳಗೊಂಡಂತೆ, ಕೆ.ಎಲ್. ರಾಹುಲ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾಹಾಗೂ ಕೊನೇ ಟೆಸ್ಟ್ ನಲ್ಲಿ ಅವಕಾಶ ಪಡೆದಿರುವ ಪೂಜಾರ ಭಾರತದ ಬ್ಯಾಟಿಂಗ್ ಬೆನ್ನೆಲುಬೆನಿಸಿದ್ದಾರೆ. ಇನ್ನು ಕರ್ನಾಟಕದ ಭರವಸೆಯ ಬ್ಯಾಟ್ಸ್ ಮನ್ ಕರುಣ್ ನಾಯರ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದು ವೇಳೆ ಕರುಣ್ ಕಣಕ್ಕಿಳಿದರೆ, ಲಂಕಾ ನೆಲದಲ್ಲಿ ಟೀ ಇಂಡಿಯಾ ಪರ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದಂತಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್