ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ, ಮಾಜಿ ಟೆಸ್ಟ್ ನಾಯಕ ಧೋನಿ, ಹಾಲಿ ಟೆಸ್ಟ್ ತಂಡದ ವಿರಾಟ್ ಕೊಹ್ಲಿ 
ಕ್ರೀಡೆ

ಧೋನಿ ದಿಢೀರ್ ನಿವೃತ್ತಿಗೆ ವಿರಾಟ್ ಕೊಹ್ಲಿ ಕಾರಣ..?

ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಿಢೀರ್ ನಿವೃತ್ತಿಗೆ ಪ್ರಸ್ತುತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಾರಣ ಎಂಬ ಶಂಕೆ ಮೂಡುತ್ತಿದೆ...

ನವದೆಹಲಿ: ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಿಢೀರ್ ನಿವೃತ್ತಿಗೆ ಪ್ರಸ್ತುತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಾರಣ ಎಂಬ ಶಂಕೆ  ಮೂಡುತ್ತಿದೆ.

ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದಿಢೀರ್ ನಿವೃತ್ತಿ ಪಡೆದ ಹಿನ್ನಲೆಯಲ್ಲಿ ಸಾಕಷ್ಟು ಊಹಾಪೋಹಗಳು ವ್ಯಕ್ತವಾಗಿದ್ದವು. ಧೋನಿ ಅವರ ಈ  ನಿರ್ಧಾರಕ್ಕೆ ಹಲವರನ್ನು ದೂಷಿಸಲಾಗಿತ್ತು. ಇದೀಗ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರು ಈ ಎಲ್ಲ ಊಹಾಪೋಹಗಳಿಗೆ ತೆರೆಎಳೆಯುವಂತಹ ಹೇಳಿಕೆ ನೀಡಿದ್ದು, ಪರೋಕ್ಷವಾದಿ ಧೋನಿ  ನಿವೃತ್ತಿಗೆ ಹಾಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಾರಣ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರವಿಶಾಸ್ತ್ರಿ ಅವರು, ಆಸ್ಟ್ರೇಲಿಯಾ ಪ್ರವಾಸದ ಸೋಲಿನಿಂದಾಗಿ ಭಾರತ ಧೋನಿ ಸಾಕಷ್ಟು ಬಸವಳಿದಿದ್ದರು. ಇದೇ ಸಮಯದಲ್ಲಿ  ಧೋನಿಗೆ ಮೂರೂ ವಿಧದ ಕ್ರಿಕೆಟ್ ನಲ್ಲಿ ತಂಡವನ್ನು ಮುನ್ನಡೆಸುವುದು ಕಷ್ಟಕರವೆನೆಸಿತು. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಾವೂ ತಂಡವನ್ನು ಸಮರ್ಥವಾಗಿ ನಿಭಾಯಿಸಬಲ್ಲೆನು  ಎಂಬುದನ್ನು ತೋರಿಸಿಕೊಟ್ಟರು. ಹೀಗಾಗಿ ಇದೇ ಉತ್ತಮ ಸಂದರ್ಭ ಎಂದು ಭಾವಿಸಿದ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದರು ಎಂದು ಹೇಳಿದರು.

ಅಲ್ಲದೆ ಯಾವುದೇ ಒಬ್ಬ ಆಟಗಾರನಿಗೆ ತನ್ನ ನಿವೃತ್ತಿಯ ಕ್ಷಣಗಳು ಕಠಿಣವಾಗಿರುತ್ತದೆ. ಆದರೆ ನನ್ನ ಪ್ರಕಾರ ಇದೊಂದು ಉತ್ತಮ ನಿರ್ಧಾರವಾಗಿತ್ತು. ಧೋನಿ ಮೊದಲೇ ತಮ್ಮ  ಮನಸ್ಸಿನಲ್ಲಿ ನಿವೃತ್ತಿ ಬಗ್ಗೆ ಯೋಚಿಸಿದ್ದರು. ಮಾಧ್ಯಮಗಳ ಮೂಲಕ ಕೊಹ್ಲಿ ಅವರನ್ನು ಟೆಸ್ಟ್ ತಂಡದ ನಾಯಕರಾಗಿ ಬಿಂಬಿಸುವುದಕ್ಕಾಗಿಯೇ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ  ಇರುವಂತೆಯೇ ನಿವೃತ್ತಿ ಘೋಷಣೆ ಮಾಡಿದರು. ಆ ಮೂಲಕ ಧೋನಿ ವಿರಾಟ್ ಕೊಹ್ಲಿ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ರವಿಶಾಸ್ತ್ರಿ  ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ