ಗೆಲುವಿನ ಸಂಭ್ರಮದಲ್ಲಿ ಭಾರತ 
ಕ್ರೀಡೆ

ಸರ್ದಾರ್ ಪಡೆಗೆ ಕಂಚಿನ ಸಂಭ್ರಮ

ಸುದೀರ್ಘ 33 ವರ್ಷಗಳ ಅವಧಿಯಲ್ಲಿ ಭಾರತ ತಂಡ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಸ್ಪರ್ಧೆಯಲ್ಲಿ ಪದಕವನ್ನು ಸಂಪಾದಿಸಿದೆ...

ರಾಯ್ ಪುರ: ಸುದೀರ್ಘ 33 ವರ್ಷಗಳ ಅವಧಿಯಲ್ಲಿ ಭಾರತ ತಂಡ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಸ್ಪರ್ಧೆಯಲ್ಲಿ ಪದಕವನ್ನು ಸಂಪಾದಿಸಿದೆ.

ರೋಚಕ ಟೈಬ್ರೇಕರ್‍ನಲ್ಲಿ ಅಂತ್ಯಗೊಂಡ ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ಭಾರತ, ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಮಹತ್ವದ ಟೂರ್ನಿಯಲ್ಲಿ ಪದಕದ  ಬರವನ್ನು ನೀಗಿಸಿಕೊಂಡಿದೆ. ಭಾನುವಾರ ಸರ್ದಾರ್ ವಲ್ಲಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಕಂಚಿನ ಪದಕದ ರೋಚಕ ಪಂದ್ಯದಲ್ಲಿ ಭಾರತ ಮತ್ತು ಹಾಲೆಂಡ್ ತಂಡಗಳು ನಿಗದಿತ  ಅವಧಿ ಮುಕ್ತಾಯಕ್ಕೆ 5-5 ಗೋಲುಗಳ ರೋಚಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದವು.

ಹಾಗಾಗಿ ಫಲಿತಾಂಶವನ್ನು ಟೈಬ್ರೇಕರ್ ಮೂಲಕ ನಿರ್ಧರಿಸಲಾಯಿತು. ಹೆಚ್ಚು ರೋಚಕವಾಗಿದ್ದ ಟೈಬ್ರೇಕರ್‍ನಲ್ಲಿ ಭಾರತ 3-2 ಅಂತರದ ಜಯ ಸಾಧಿಸಿ ಕಂಚಿನ ಪದಕವನ್ನು ಪಡೆಯಿತು. ಭಾರತದ ಗೋಲ್ ಕೀಪರ್ ಶ್ರೀಜೇಶ್ ಪ್ರದರ್ಶನ ಪ್ರಮುಖವಾಯಿತು. ಭಾರತ ತಂಡದ ಪರ ರಮಣ್‍ದೀಪ್ ಸಿಂಗ್ 39, 51ನೇ, ರೂಪಿದರ್ ಪಾಲ್ ಸಿಂಗ್ 47, 55ನೇ, ಆಕಾಶ್  ದೀಪ್ ಸಿಂಗ್  56ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಹಾಲೆಂಡ್ ತಂಡದ ಪರ ಮಿರ್ಕೊ 9ನೇ, ನಿಕ್ ವ್ಯಾನ್ ಡರ್ 25ನೇ ಮತ್ತು ಮಿಂಕ್ ವ್ಯಾನ್ ಡರ್ 54, 58ನೇ ನಿಮಿಷದಲ್ಲಿ ಗೋಲು ಬಾರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

SCROLL FOR NEXT