ಕ್ರೀಡೆ

ಭಾರತೀಯ ಬಾಕ್ಸರ್‍ಗಳ ಶುಭಾರಂಭ

Srinivasamurthy VN

ನವದೆಹಲಿ:  ತಮ್ಮ ಮೇಲಿನ ಒಂದು ವರ್ಷದ ನಿಷೇಧದ ಶಿಕ್ಷೆಯಿಂದ ಹೊರಬಂದಿರುವ ಏಷ್ಯನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಎಲ್. ಸರಿತಾ ದೇವಿ (60 ಕೆಜಿ), ಗೆಲವಿನ ಮೂಲಕ ತಮ್ಮವೃತ್ತಿಜೀವನವನ್ನು ಪುನರಾರಂಭಿಸಿದ್ದಾರೆ.

ಚೀನಾದ ಕ್ವಿಯಾನ್ಯಾನ್ ನಗರದಲ್ಲಿ ನಡೆಯುತ್ತಿರುವ ತರಬೇತು ಹಾಗೂ ಸ್ಪರ್ಧಾ ಟೂರ್ನಿಯ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸರಿತಾ (60 ಕೆಜಿ) ಅವರು, ಮಂಗೋಲಿಯಾದ  ಸೊವೊಡೆರ್ಡೆನ್ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿದರು. ಟೂರ್ನಿಯ ಭಾನುವಾರ ನಡೆದ ಇತರ ವಿಭಾಗಗಳ ಪಂದ್ಯಗಳಲ್ಲಿ ಭಾರತೀಯರು ಪಾರಮ್ಯ ಮೆರೆದರು. ಪುರುಷರ ವಿಭಾಗದ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಶಿವ ಥಾಪಾ, ಥಾಯ್ಲೆಂಡ್ ಡ್‍ನ ಯುಟ್ಟಾಪಾಂಗ್ ಥೋಂಗ್ ಡೀ ವಿರುದ್ಧ 3-0 ಅಂತರದಲ್ಲಿ  ವಿಜಯಿಯಾದರು.  ಮತ್ತೊಂದು ಪಂದ್ಯದಲ್ಲಿ, ಕಾಮನ್ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಎಲ್. ದೇವೇಂದ್ರೂ ಸಿಂಗ್ (49 ಕೆಜಿ), ಚೀನಾದ ಯಂಗ್ ಯುಫೆಂಗ್ ವಿರುದ್ಧ `ತಾಂತ್ರಿಕ ನಾಕೌಟ್' ಮೂಲಕ ಜಯ  ಸಾಧಿಸಿದರು.

ಕಾಮನ್ವೆಲ್ತ್ ಕ್ರೀಡಾಕೂಟದ ಮತ್ತೊಬ್ಬ ಬೆಳ್ಳಿ ಪದಕ ವಿಜೇತ ಮಂದೀಪ್ ಜಾಗ್ರಾ (69 ಕೆಜಿ), ಥಾಯ್ಲೆಂಡ್ ಡ್‍ನ ನಿಕ್ ಪಿsಶರ್ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿದರೆ, ಏಷ್ಯನ್  ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತ ವಿಕಾಸ್ ಕೃಷ್ಣನ್ (75 ಕೆಜಿ) ವಿಭಾಗದಲ್ಲಿ ಥಾಯ್ಲೆಂಡ್ ಡ್‍ನವರೇ ಆದ ಆಪಿsಸಿಟ್ ವಿರುದ್ಧ 3-0 ಅಂತರದಲ್ಲಿ ವಿಜಯಿಯಾದರು. ಇನ್ನುಳಿದ ಬಾಕ್ಸರ್ ಗದ  ಕುಲ್ದೀಪ್ ಸಿಂಗ್ (81 ಕೆಜಿ), ಅಮ್ರಿತ್‍ಪ್ರೀತ್ ಸಿಂಗ್ (91 ಕೆಜಿ), ನರೇಂದರ್ (+91 ಕೆಜಿ) ಸಹ ತಮ್ಮ ಮೊದಲ ಸುತ್ತುಗಳ ಪಂದ್ಯವನ್ನು ಜಯ ಸಾಧಿಸಿದರು. ಆದರೆ, ಇತರ ಪುರುಷರ ವಿಭಾಗದ  ಪಂದ್ಯಗಲ್ಲಿ ಯುವ ಬಾಕ್ಸರ್ ಗದ ಗೌರವ್ ಬಿಂಧೂರಿ (52 ಕೆಜಿ), ಮನೀಶ್ ಕೌಶಿಕ್ (60 ಕೆಜಿ) ಸೋಲು ಕಂಡರೆ, ಮಹಿಳೆಯರ ವಿಭಾಗದಲ್ಲಿ ಪಿಂಕಿ ಜಾಗ್ರಾ (51 ಕೆಜಿ) ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಪರಾಭವ ಹೊಂದಿ, ನಿರಾಸೆ ಅನುಭವಿಸಿದರು.

SCROLL FOR NEXT