ಕ್ರೀಡೆ

ರಾಷ್ಟ್ರಮಟ್ಟದ ಶಾರ್ಪ್ ಶೂಟರ್ ಗೆ ಗುಜರಾತ್ ನಲ್ಲಿ ನೂಡಲ್ಸ್ ಮಾರುವ ಕಾಯಕ

Shilpa D

ವಡೋದರ: ಮಹಿಳಾ ಸಬಲೀಕರಣದ ಬಗ್ಗೆ ಸದಾ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತಿನಲ್ಲಿ, ಬಡತನದ ಶಾಪದಿಂದ ರಾಷ್ಟ್ರಮಟ್ಟದ ಶೂಟರ್ ಒಬ್ಬರು ಹೊಟ್ಟೆಪಾಡಿಗೆ ಬೀದಿ ಬದಿಯಲ್ಲಿ ನೂಡಲ್ಸ್ ಮಾರುತ್ತಿರುವ ಮನಕಲಕುವ ಪ್ರಕರಣ ಬೆಳಕಿಗೆ ಬಂದಿದೆ.

ಪುಷ್ಪಾ ಗುಪ್ತ, ಉದಯೋನ್ಮುಖ ಕ್ರೀಡಾಪಟು. ಕುಟುಂಬವನ್ನು ಸಾಕಿ, ಸಲಹುವ ಜವಾಬ್ದಾರಿ ಹೊತ್ತಿರುವ ಈಕೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ತನ್ನ ನೂಡಲ್ಸ್ ಮಾರಾಟ ಮಾಡುವ ಕೈಗಾಡಿಯ ಮುಂದೆ  ಶೂಟಿಂಗ್ ಸ್ಪರ್ಧೆಯಲ್ಲಿ ತಾವು ಪಡೆದ ಪದಕಗಳನ್ನು ನೇತುಹಾಕಿದ್ದಾರೆ.

2013ರಲ್ಲಿ ಕಾಲೇಜು ಸೇರಿದ್ದ ಪುಪ್ಪಾ, ಶೂಟಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಬಳಿಕ ಎನ್‌ಸಿಸಿಗೆ ಸೇರಿ, ಶೂಟಿಂಗ್‌ನಲ್ಲಿ ಗುಜರಾತ್ ರಾಜ್ಯವನ್ನು ಪ್ರತಿನಿಧಿಸಿದ್ದರು. ಆದರೆ, ಎನ್‌ಸಿಸಿ ಮುಗಿದ ನಂತರ ದುಬಾರಿ ಕ್ರೀಡೆಯಾದ ಶೂಟಿಂಗ್ ಮುಂದುವರಿಸಲು ಆಕೆಗೆ ಸಾಧ್ಯವಾಗಿಲ್ಲ.

'ಮಿಲಿಟರಿ ಆರ್ಗನೈಸೇಶನ್‌ನಿಂದ ದೊರಕುತ್ತಿದ್ದ ಆರ್ಥಿಕ ನೆರವು ನಿಂತು ಹೋಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಆರ್ಥಿಕ ಪರಿಸ್ಥಿತಿ ಸರಿಹೊಂದದ ಕಾರಣ ಶೂಟಿಂಗ್ ಮುಂದುವರಿಸುವುದು ಬೇಡ ಎಂದು ತಂದೆ ಹೇಳಿದರು. ಬಳಿಕ ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ನೂಡಲ್ಸ್ ಮಾರಾಟ ಆರಂಭಿಸಿದೆ ಎಂದು ಪುಷ್ಪ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

SCROLL FOR NEXT