ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೆಸ್ಫಿನ್, ಮಿಕಿಯಾಸ್ ಚಾಂಪಿಯನ್

ಬಹು ನಿರೀಕ್ಷಿತ 9ನೇ ಆವೃತ್ತಿಯ ಎಸ್‍ಬಿಐ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್ ನಲ್ಲಿ ಇಥಿಯೋಪಿಯಾ ಅಥ್ಲೀಟ್‍ಗಳಾದ ಮೆಸ್ಫಿನ್ ಮೆಲ್ಸೆ ಬಾಲ್ಚಾ ಹಾಗೂ ಮಿಕಿಯಾಸ್ ಮೇಲುಗೈ ಸಾಧಿಸಿದರು...

ಎಸ್‍ಬಿಐ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್
Srinivasa Murthy VN
Updated On : 7 Dec 2015, 10:40 am

ಬೆಂಗಳೂರು: ಬಹು ನಿರೀಕ್ಷಿತ 9ನೇ ಆವೃತ್ತಿಯ ಎಸ್‍ಬಿಐ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್ ನಲ್ಲಿ ಇಥಿಯೋಪಿಯಾ ಅಥ್ಲೀಟ್‍ಗಳಾದ ಮೆಸ್ಫಿನ್ ಮೆಲ್ಸೆ ಬಾಲ್ಚಾ ಹಾಗೂ ಮಿಕಿಯಾಸ್ ಮೇಲುಗೈ ಸಾಧಿಸಿದರು.

ಶನಿವಾರ ಮಧ್ಯರಾತ್ರಿ 12 ಗಂಟೆಗೆ ಆರಂಭಗೊಂಡ ಪೂರ್ಣ ಪ್ರಮಾಣದ ಮ್ಯಾರಥಾನ್‍ನಲ್ಲಿ ಮೆಸ್ಫಿನ್ ಅವರು ನಿಗದಿತ ದೂರವನ್ನು 2 ಗಂಟೆ 23 ನಿಮಿಷಗಳಲ್ಲಿ ಮುಟ್ಟಿ ಮೊದಲಿಗರಾಗಿ ಹೊರ ಹೊಮ್ಮುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಅರೆ ಮ್ಯಾರಥಾನ್‍ನಲ್ಲಿ ಮಿಕಿಯಾಸ್ 32 ನಿಮಿಷಗಳಲ್ಲಿ ಗುರಿ ಮುಟ್ಟಿ ಪ್ರಶಸ್ತಿಗೆ ಭಾಜನರಾದರು. ಅಂತಾರಾಷ್ಟ್ರೀಯ  ಮ್ಯಾರಥಾನ್ ಹಾಗೂ ಡಿಸ್ಟನ್ಸ್ ರೇಸರ್ ಸಂಸ್ಥೆ (ಎಐಎಎಸ್ -ಐಎಎಎಫ್ )ನ ಅಂಗಸಂಸ್ಥೆಯಾದ ಬೆಂಗಳೂರು ಮಿಡ್‍ನೈಟ್ ಮ್ಯಾರಥಾನ್ ವತಿಯಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ,  ಪೂರ್ಣ ಪ್ರಮಾಣದ ಮ್ಯಾರಥಾನ್, ಕೇರ್‍ವೆಲ್ ಅರೆ ಮ್ಯಾರಥಾನ್, ಟಾರ್ಗೆಟ್ ಓಪನ್ 10ಕೆ ರನ್, ಡೆಲೋಯಿಟ್ ಮಹಿಳಾ 10ಕೆ ರನ್, 5 ಕೆ ಐಟಿ ಸಿಟಿ ಫನ್ ರನ್, ಏರ್‍ಬಸ್ ಕಾರ್ಪೊರೇಟ್ ರಿಲೇ,  ಕಮ್ಯೂನಿಟಿ ರಿಲೇ ಹಾಗೂ ಏರ್‍ಬಸ್ ಕಾರ್ಪೊರೇಟ್ ರಿಲೇ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.

ಸ್ಪರ್ಧೆ ಉದ್ಘಾಟಿಸಿದ `ಫ್ಲೈಯಿಂಗ್ ಸಿಖ್' ಮಿಲ್ಖಾ ಸಿಂಗ್ ಶನಿವಾರ ಸಂಜೆ 6:30ಕ್ಕೆ ವೈಟ್‍ಪಿsೀಲ್ಡ್‍ನ ಕೆಟಿಪಿಒನಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭದಲ್ಲಿ, ಫ್ಲೈಯಿಂಗ್ ಸಿಖ್  ಖ್ಯಾತಿಯ ಮಾಜಿ ಅಥ್ಲೀಟ್ ಮಿಲ್ಖಾ ಸಿಂಗ್, ಬಾವುಟ ಬೀಸುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. `ರನ್ ಫಾರ್ ಹ್ಯಾಪಿ ಬೆಂಗಳೂರು' ಧ್ಯೇಯ ವಾಕ್ಯದಡಿ ಸಾಗಿದ ಈ ಮ್ಯಾರಥಾನ್ ನಲ್ಲಿ  15 ರಾಷ್ಟ್ರಗಳ, ದೇಶದ 24 ರಾಜ್ಯಗಳಿಂದ ಸುಮಾರು 11 ಸಾವಿರ ಅಥ್ಲೀಟ್‍ಗಳು ಭಾಗವಹಿಸಿದ್ದರು. ಮಿಲ್ಖಾ ಸಿಂಗ್ ಅವರನ್ನು ನೋಡಲು ಸಾವಿರಾರು ಜನರು ಸಾಗರೋಪಾದಿಯಲ್ಲಿ  ಕೆಟಿಪಿಒನಲ್ಲಿ ಜಮಾಯಿಸಿದ್ದರು. ಎಲ್ಲೆಡೆಯೂ ಅಭಿಮಾನ ಅಲೆಗಳು ಉಕ್ಕೇಳುತ್ತಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement