ಕ್ಯಾರೋಲಿನ್ ಮರಿನ್ (ಸಂಗ್ರಹ ಚಿತ್ರ) 
ಕ್ರೀಡೆ

ಮರಿನ್ ಪಾಲಾದ ವರ್ಷದ ಆಟಗಾರ್ತಿ ಗೌರವ

ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟದ ವರ್ಷದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಭಾರತದ ಸೈನಾ ನೆಹ್ವಾಲ್ ಗೆ ನಿರಾಸೆಯಾಗಿದೆ. ಕಾರಣ ಆಲ್..

ದುಬೈ: ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟದ ವರ್ಷದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಭಾರತದ ಸೈನಾ ನೆಹ್ವಾಲ್ ಗೆ ನಿರಾಸೆಯಾಗಿದೆ. ಕಾರಣ ಆಲ್ ಇಂಗ್ಲೆಂಡ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್‍ಶಿಪ್ ವಿಜೇತೆ ಕ್ಯಾರೊಲಿನ್ ಮರಿನ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸೋಮವಾರ ರಾತ್ರಿ ನಡೆದ ಸಮಾರಂಭದಲ್ಲಿ ಮರಿನ್ ಬಿಡಬ್ಲ್ಯೂಎಫ್  ಅಧ್ಯಕ್ಷ ಪೌಲ್ ಎರಿಕ್ ಹೈರ್ ಅವರಿಂದ ಮರಿನ್ ಈ ಪ್ರಶಸ್ತಿಯನ್ನು ಪಡೆದರು. ಐದು ವಿಶ್ವ ಸೂಪರ್ ಸಿರೀಸ್ ಟೂರ್ನಿಗಳನ್ನು ಗೆದ್ದುಕೊಂಡಿರುವ ಕ್ಯಾರೊಲಿನ್ ಮರಿನ್, ಭಾರತದ ಸೈನಾ ನೆಹ್ವಾಲ್ ಜತೆಗೆ ಚೀನಾದ ಝಾವ್ ಯುನ್ಲೆ ಮತ್ತು ಬಾವ್ ಯಿಕ್ಸಿನ್ ಅವರನ್ನು ಸಹ ಹಿಂದಿಕ್ಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

``ಈ ಪ್ರಶಸ್ತಿಯನ್ನು ಚೀನಾದ ಝಾವ್ ಅವರು ಗೆಲ್ಲುವುದಾಗಿ ಭಾವಿಸಿದ್ದೆ. ಕಾರಣ ಈ ವರ್ಷ ಅವರು ಉತ್ತಮ ಸಾಧನೆ ಮಾಡಿದ್ದರು. ಈ ಪ್ರಶಸ್ತಿ ನನಗೆ ಲಭಿಸಿರುವುದು ಸಂತಸ ತಂದಿದೆ.  ಇದರಿಂದ ಈ ವರ್ಷ ನಾನು ಏನಾದರೂ ಸಾಧನೆ ಮಾಡಿದ್ದೇನೆ ಎಂಬುದನ್ನು ನೆನಪಿಸುತ್ತದೆ'' ಎಂದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT