ನವದೆಹಲಿ: ಐಎಸ್‍ಎಲ್‍ನ ಅಟ್ಲೆಟಿಕೊ ಡಿ ಕೋಲ್ಕತಾ ತಂಡದ ಸಹ ಮಾಲೀಕರಾಗಿರುವ ಸಂಜೀವ್ ಗೊಯಂಕಾ ಅವರು ಐಪಿಎಲ್ ನ ಫ್ರಾಂಚೈಸಿ ಪಡೆದಿರುವುದರಿಂದ ಅಟ್ಲೆಟಿಕೊ ತಂಡದ ಸಹ ಮಾಲೀಕ ಸೌರವ್ ಗಂಗೂಲಿಗೆ ಸ್ವಹಿತಾಸಕ್ತಿ ಸಂಘರ್ಷ ಅನ್ವಯವಾಗುವುದಿಲ್ಲ.
ಒಂದುವೇಳೆ ಗಂಗೂಲಿ ಯಾವುದಾದರು ಐಪಿಎಲ್ ತಂಡದ ಭಾಗವಾದರೆ ಮಾತ್ರ ಸ್ವಹಿತಾಸಕ್ತಿ ಸಂಘರ್ಷ ವಿಷಯ ಬರುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ. ಮತ್ತೊಂದೆಡೆ ಈ ಕುರಿತು ಮಾತನಾಡಿರುವ ಸಂಜಯ್, ``ಐಪಿಎಲ್‍ನ ಪುಣೆ ಫ್ರಾಂಚೈಸಿಗೂ ಗಂಗೂಲಿಗೂ ಯಾವುದೇ ಸಂಬಂಧವಿಲ್ಲ. ತಂಡದ ಶೇ.100ರಷ್ಟು ಮಾಲೀಕತ್ವ ನನ್ನದೇ'' ಎಂದು ಸ್ಪಷ್ಟಪಡಿಸಿದ್ದಾರೆ.