ಬೆಂಗಳೂರು: ಹಾಕಿ ಫಾರ್ ಹೋಪ್ ಅಭಿಯಾನದಡಿ ಆಯೋಜಿಸ ಲಾಗಿರುವ 5ನೇ ಜೆಎಫ್ಎಚ್‍ಎ ಹಾಕಿ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಮರಿಯಾ ನಿಕೇತನ ತಂಡವು, ಸೇಂಟ್ ಜೋಸೆಫ್ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿತು.
ಜಿದ್ದಾಜಿದ್ದಿನ ಹೋರಾಟವನ್ನೊಳ ಗೊಂಡಿದ್ದ ಪಂದ್ಯದ ಮೊದಲ ನಿಮಿಷದಲ್ಲೇ ಗೋಲು ಗಳಿಸುವಲ್ಲಿ ಯಶಸ್ವಿಯಾದ ನಿಕೇತನ ತಂಡ, ಮರಿಯಾ ನಿಕೇತನ ತಂಡದ ವಿರುದ್ಧ ಹಿಡಿತ ಸಾಧಿಸಿತು. ಆ ತಂಡದ, ಜಾನ್ಸನ್ ಅವರು ತಮಗೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಇತ್ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಜಾನ್ಸನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.