ಕ್ರೀಡೆ

ಡಿವಿಲಿಯರ್ಸ್ ಈಗ ವಿಕೆಟ್ ಕೀಪರ್!

Srinivasamurthy VN

ಕೇಪ್‍ಟೌನ್: ಶೀಘ್ರದಲ್ಲೇ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ದ.ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್  ಮಾಡಲಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ಮುಖಭಂಗ ಅನುಭವಿಸಿರುವ ಹರಿಣಗಳ ಪಡೆಯನ್ನು ಆ  ತಂಡದ ಆಯ್ಕೆ ಮಂಡಳಿ ಸಂಪೂರ್ಣವಾಗಿ ಪುನಾರಚಿಸಲು ಮುಂದಾಗಿದ್ದು,  ವಿಕೆಟ್‍ಕೀಪರ್ ಬ್ಯಾಟ್ಸ್ ಮನ್ ಕ್ವಿಂಟಾನ್ ಡಿ ಕಾಕ್, ಡೇನ್ ವಿಲಾಸ್ ಅವರನ್ನು ಹರಿಣಗಳ `ಎ' ತಂಡಕ್ಕೆ ವರ್ಗಾಯಿಸಿದೆ. ವ್ಯಾನ್ ಜಿಲ್, ಎಲ್ಗರ್ ಆರಂಭಿಕರಾಗಿದ್ದು, ಟೆಂಬಾಬುವುಮಾ ಮಧ್ಯಮ  ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆಂದು ಎನ್‍ಡಿಟಿವಿ ಹೇಳಿದೆ.

SCROLL FOR NEXT