ಫೆ.24ರಿಂದ ಬಿಎಫ್ ಸಿ ಅಭಿಯಾನ
ಕಳೆದ ವರ್ಷದ `ಐ' ಲೀಗ್ ಪಂದ್ಯಾವಳಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ ಮುಂದಿನ ಆವೃತ್ತಿಯ ಏಷ್ಯನ್ ಫುಟ್ಬಾಲ್ ಕಾನೆ#ಡರೇಷನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಚ್ ಗುಂಪಿನಲ್ಲಿ ಸ್ಥಾನ ಪಡೆದಿದೆ...
ಮಲೇಷ್ಯಾ: ಕಳೆದ ವರ್ಷದ `ಐ' ಲೀಗ್ ಪಂದ್ಯಾವಳಿಯ ರನ್ನರ್ ಅಪ್ ಬೆಂಗಳೂರು ಎಫ್ ಸಿ ಮುಂದಿನ ಆವೃತ್ತಿಯ ಏಷ್ಯನ್ ಫುಟ್ಬಾಲ್ ಕಾನೆ#ಡರೇಷನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎಚ್ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಗುರುವಾರ ಕೌಲಾಂಲಂಪುರದಲ್ಲಿ ನಡೆದ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ ಕ್ಲಬ್ಗಳ ಕಾರ್ಯಾಗಾರದಲ್ಲಿ ಮುಂದಿನ ಆವೃತ್ತಿಯ ಎಎಫ್ ಸಿ ಕಪ್ ತಂಡಗಳನ್ನು ಗುಂಪುಗಳಾಗಿ ವಿಂಗಡಿಸಿ ವೇಳಾಪಟ್ಟಿ ಪ್ರಕಟಿಸಲಾಯಿತು. ಬಿಎಫ್ ಸಿ `ಎಚ್' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮಲೇಷ್ಯಾದ ಜೊಹೊರ್ ಡರುಲ್ ತಜ್ಮಿ, ಲಾವೊದ ಲಾವೊ ಟೊಯೋಟಾ ಎಫ್ ಸಿ ಮತ್ತು ಮ್ಯಾನ್ಮಾರ್ನ ಅಯೆಯವಾಡಿ ಎಫ್ ಸಿ ವಿರುದ್ಧ ಸೆಣಸಲಿದೆ. ``ಎಎಫ್ ಸಿ ಕಪ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆಯಾಗಿರುವುದು ಸಂತೋಷ ತಂದಿದೆ. ಈ ವರ್ಷವೂ ಉತ್ತಮ ಪ್ರದರ್ಶನ ನೀಡುತ್ತೆವೆ'' ಎಂದು ಬಿಎಫ್ ಸಿ ಕೋಚ್ ಆ್ಯಶ್ಲೆ ವೆಸ್ಟ್ ವುಡ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.