ಕ್ರೀಡೆ

ಗುರುಪ್ರೀತ್‍ಗೆ ಬಂಗಾರ

Srinivas Rao BV

ನವದೆಹಲಿ: ರಿಯೋ ಒಲಿಂಪಿಕ್ಸ್ ಗೆ ಈಗಾಗಲೇ ಅರ್ಹತೆ ಪಡೆದಿರುವ ಶೂಟರ್ ಗುರುಪ್ರೀತ್ ಸಿಂಗ್, 59ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಬಂಗಾರದ ಗೆದ್ದಿದ್ದಾರೆ.
ಡಾ. ಕಾರ್ಣೀ ಸಿಂಗ್ ಶೂಟಿಂಗ್ ರೇಂಜ್‍ನಲ್ಲಿ ಗುರುವಾರ ನಡೆದ 25 ಮೀ. ಸ್ಪರ್ಧೆಯ ಪದಕ ಸುತ್ತಿನ ಸ್ಪರ್ಧೆಯಲ್ಲಿ ಒಟ್ಟಾರೆಯಾಗಿ 573 ಅಂಕಗಳನ್ನು ಪಡೆದ, ಭಾರತೀಯ ಸೇನೆಯನ್ನು
ಪ್ರತಿನಿಧಿಸಿರುವ ಗುರುಪ್ರೀತ್ ಸಿಂಗ್, ಬಂಗಾರದ ಗೌರವಕ್ಕೆ ಪಾತ್ರರಾದರು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಮಹಾವೀರ್ ಸಿಂಗ್, ಗುರುಪ್ರೀತ್‍ಗಿಂತಲೂ ಕೇವಲ 2 ಅಂಕಗಳ ಕಡಿಮೆ ಸಾಧನೆ ಮಾಡಿ, ರಜತ ಗೌರವಕ್ಕೆ ಪಾತ್ರರಾದರು. ಇನ್ನು, ಹರ್‍ಪ್ರೀತ್ ಸಿಂಗ್ ಕಂಚಿನ ಗೌರವ ಪಡೆದರು.

SCROLL FOR NEXT