ದುಬೈ: ಇದೇ ವರ್ಷ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಭಾರತ ತಂಡದ ಜತೆ ಕಳುಹಿಸಲಾದ ಹೆಚ್ಚುವರಿ ಆಟಗಾರರ ಖರ್ಚು ಮತ್ತು ಇತರೆ ವೆಚ್ಚಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ರು.2.4 ಕೋಟಿ ಮೊತ್ತ ಪಾವತಿಸಿದೆ.
ಐಸಿಸಿ ನಿಯಮದ ಪ್ರಕಾರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ತಂಡದಲ್ಲಿ ಕೇವಲ 15 ಆಟಗಾರರು ಮಾತ್ರ ಇರಬೇಕು. ಮಧ್ಯಮ ವೇಗಿ ಧವಳ್ ಕುಲಕರ್ಣಿ ವಿಶ್ವಕಪ್ ತಂಡದ ಜತೆ ಉಳಿದುಕೊಂಡಿದ್ದರು. ವಿಮಾನ ಪ್ರಯಾಣ, ಉಳಿದುಕೊಳ್ಳುವ ವ್ಯವಸ್ಥೆ, ಊಟ ಹಾಗೂ ಇತರೆ ಖರ್ಚು ಸೇರಿದಂತೆ ಬಿಸಿಸಿಐ ಈ ಮೊತ್ತವನ್ನು ಪಾವತಿ ಮಾಡಿದೆ ಎಂದು ತಿಳಿಸಲಾಗಿದೆ.