ನವದೆಹಲಿ: ಬಿಸಿಸಿಐ ಹಾಗೂ ರಾಜಸ್ಥಾನ ಕ್ರಿಕೆಟ್ ಮಂಡಳಿ (ಆರ್‍ಸಿಎ) ನಡುವಿನ ದ್ವೇಷಾಗ್ನಿ ಸದ್ಯಕ್ಕೆ ತಣ್ಣಗಾಗುವ ಸೂಚನೆಗಳಿಲ್ಲ. ಐಪಿಎಲ್ ಮಾಜಿ ಆಯುಕ್ತ ಲಲಿತ್ ಮೋದಿ, ಆರ್‍ಸಿಎ ಅಧ್ಯಕ್ಷ ಗಿರಿಯಲ್ಲಿ ಮುಂದುವರಿಯಲಿದ್ದಾರೆ.
ಇತ್ತೀಚೆಗೆ, ಮೋದಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದ ಆರ್‍ಸಿಎ ಸದಸ್ಯ ಹಾಗೂ ಬಿಜೆಪಿ ನಾಯಕ ಅಮಿನ್ ಪಠಾಣ್, ತಮ್ಮ ಗೊತ್ತುವಳಿಯನ್ನು ಹಿಂಪಡೆದಿದ್ದು ಲಿಲಿತ್ ಮೋದಿ ಅಧ್ಯಕ್ಷ ಸ್ಥಾನಕ್ಕೆ ಒದಗಿದ್ದ ಕಂಟಕ ದೂರಾಗಿದೆ. ಆದರೆ, ಇದರಿಂದಾಗಿ ಈಗಾಗಲೇ ಬಿಸಿಸಿಐ ವತಿಯಿಂದ ಅಮಾನು ತಗೊಂಡಿದ್ದ ರಾಜಸ್ಥಾನ ಕ್ರಿಕೆಟ್ ಮಂಡಳಿಯ ಸ್ಥಿತಿ ಅದೇ ರೀತಿಯಲ್ಲಿ ಮುಂದುವರಿದಿದೆ. ಕ್ರಿಕೆಟ್ ಕ್ರೀಡೆಯ ಹಿತದೃಷ್ಠಿಯಿಂದಾಗಿ ಲಲಿತ್ ಮೋದಿ ವಿರುದ್ಧ ಅವಿಶ್ವಾಸ ಗೊತ್ತುವಳಿಯಲ್ಲಿ ಮತ ಹಾಕಿದ್ದ 15 ಜಿಲ್ಲೆ ಮತ್ತು ಮೂರು ಇತರೆ ಅಧಿಕಾರಿಗಳು ತಮ್ಮ ಮತವನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.