ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ) 
ಕ್ರೀಡೆ

ಫೆಡರರ್, ಮೆಸ್ಸಿಗಿಂತಲೂ ವಿರಾಟ್ ಜನಪ್ರಿಯ

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ ಬಂದಿದೆ. ಅಂತರ್ಜಾಲ ದೈತ್ಯ ಗೂಗಲ್ ಸರ್ಚ್ ಇಂಜಿನ್‍ನಲ್ಲಿ, ಜನರಿಂದ ಈ ವರ್ಷ ಅತಿ ಹೆಚ್ಚು ಹುಡುಕಾಟಕ್ಕೊಳಗಾದ ವ್ಯಕ್ತಿಯೆಂಬ ಹೆಗ್ಗಳಿಕೆ ಅವರ ಪಾಲಾಗಿದೆ...

ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ ಬಂದಿದೆ. ಅಂತರ್ಜಾಲ ದೈತ್ಯ ಗೂಗಲ್ ಸರ್ಚ್ ಇಂಜಿನ್‍ನಲ್ಲಿ, ಜನರಿಂದ ಈ ವರ್ಷ ಅತಿ  ಹೆಚ್ಚು ಹುಡುಕಾಟಕ್ಕೊಳಗಾದ ವ್ಯಕ್ತಿಯೆಂಬ ಹೆಗ್ಗಳಿಕೆ ಅವರ ಪಾಲಾಗಿದೆ.

ಆದರೆ, ಇದಕ್ಕಿಂತಲೂ ವಿಶೇಷವೆಂದರೆ ಗೂಗಲ್ ಸರ್ಚ್‍ನಲ್ಲಿ ಅವರು ವಿಶ್ವ ಕ್ರೀಡಾಲೋಕದ ಖ್ಯಾತ ನಾಮರಾದ ಲಿಫಿನೆಲ್ ಮೆಸ್ಸಿ (ಬಾರ್ಸಿಲೊನಾ), ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ  (ಭಾರತ), ಕ್ರಿಶ್ಚಿಯಾನೊ ರೊನಾಲ್ಡೊ (ಪೋರ್ಚುಗಲ್), ನೊವಾಕ್ ಜೊಕೊವಿಚ್ (ಸರ್ಬಿಯಾ) ಹಾಗೂ ರೋಜರ್ ಫೆಡರರ್ (ಸ್ವಿಜರ್ಲೆಂಡ್) ಅವರನ್ನೂ ಹಿಂದಿಕ್ಕಿರುವುದು. ಟೀಂ ಇಂಡಿಯಾ ಟೆಸ್ಟ್  ತಂಡದ ಸಾರಥ್ಯ ವಹಿಸಿಕೊಂಡ ಮೇಲೆ ಸತತವಾಗಿ ಎರಡು ಟೆಸ್ಟ್ ಸರಣಿಗಳಲ್ಲಿ ಜಯದ ಸವಿಯಂಡು, ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರಿಂದ ಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿರುವ ಕೊಹ್ಲಿ,  ಇದೀಗ ಅಂತರ್ಜಾಲದಲ್ಲೂ ಅತಿ ಜನಪ್ರಿಯ ಕ್ರೀಡಾಳು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ಆಲ್ ಸ್ಟಾರ್ಸ್ ಕ್ರಿಕೆಟ್ ಲೀಗ್ ವೇಳೆ ಅತಿ ಹೆಚ್ಚು ಅಂತರ್ಜಾಲ ಸರ್ಚ್‍ಗೆ ಒಳಗಾಗಿದ್ದರು. ಆದರೆ ವಿರಾಟ್ ಕೊಹ್ಲಿ ವಿಶ್ವದ ಪ್ರಮುಖ ಆಟಗಾರರನ್ನು ಹಿಂದಿಕ್ಕಿ ಮುನ್ನಡೆ  ಸಾ„ಸಿದ್ದಾರೆ. ಇನ್ನು, ಪ್ರಸಕ್ತ ವರ್ಷದಲ್ಲಿ ಪ್ರೇಕ್ಷಕರು ಹೆಚ್ಚು ಹುಡುಕಾಟ ನಡೆಸಿದ ಭಾರತೀಯ ಆಟಗಾರ್ತಿಯರಲ್ಲಿ ಸಾನಿಯಾ ಮಿರ್ಜಾ ಅಗ್ರಸ್ಥಾನದಲ್ಲಿದ್ದಾರೆ. ಅವರು ಅಗ್ರ ಹತ್ತು ಮಂದಿ ಕ್ರೀಡಾಪಟುಗಳಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಇರುವ ಏಕೈಕ ಮಹಿಳಾ ಅಥ್ಲೀಟ್ ಎಂಬುದು ವಿಶೇಷ.

ಟಾಪ್ 10 ಪಟ್ಟಿ
1. ವಿರಾಟ್ ಕೊಹ್ಲಿ
2. ಲಿಫಿನೆಲ್ ಮೆಸ್ಸಿ
3. ಸಚಿನ್ ತೆಂಡೂಲ್ಕರ್
4. ಎಂ.ಎಸ್. ಧೋನಿ
5. ಕ್ರಿಶ್ಚಿಯಾನೊ ರೊನಾಲ್ಡೊ
6. ರೋಜರ್ ಫೆಡರರ್
7. ಸಾನಿಯಾ ಮಿರ್ಜಾ
8. ರೋಹಿತ್ ಶರ್ಮಾ
9. ಯುವರಾಜ್ ಸಿಂಗ್
10. ನೊವಾಕ್ ಜೊಕೊವಿಚ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!