ಪೋಸ್ಟಲ್ ಫುಟ್ ಬಾಲ್ (ಸಂಗ್ರಹ ಚಿತ್ರ) 
ಕ್ರೀಡೆ

ಫೈನಲ್‍ಗೆ ಕರ್ನಾಟಕ, ಕೇರಳ

ನಗರದಲ್ಲಿ ನಡೆಯುತ್ತಿರುವ 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಆತಿಥೇಯ ಕರ್ನಾಟಕ ಮತ್ತು ಕೇರಳ ತಂಡಧಾವಿಸಿವೆ...

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಆತಿಥೇಯ ಕರ್ನಾಟಕ ಮತ್ತು ಕೇರಳ ತಂಡಧಾವಿಸಿವೆ.

ಗುರುವಾರ ಇಲ್ಲಿನ ಅಶೋಕನಗರದ ರಾಜ್ಯ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ `ಎ' ಗುಂಪಿನ ವಿಜೇತ ತಂಡ ಕೇರಳ, `ಸಿ' ಗುಂಪಿನ ವಿಜೇತ ತಂಡವಾದ ಒಡಿಶಾ ವಿರುದ್ಧ ನಡೆದ  ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳಿಂದ ಜಯಶಾಲಿಯಾಯಿತು. ಕೇರಳ ತಂಡದ ಪರ ವಿ.ಎ. ಶಿನು ಪಂದ್ಯದ 25 ಹಾಗೂ 76ನೇ ನಿಮಿಷದಲ್ಲಿ ಎರಡು ಗೋಲು ದಾಖಲಿಸಿ ಜಯ ತಂದಿತ್ತರು.

ಬಳಿಕ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ `ಡಿ' ಗುಂಪಿನ ವಿಜೇತ ತಂಡವಾದ ಜಮ್ಮು ಹಾಗೂ ಕಾಶ್ಮೀರ ತಂಡವನ್ನು `ಬಿ' ಗುಂಪಿನ ವಿಜೇತ ತಂಡ ಕರ್ನಾಟಕ 4-0 ಗೋಲುಗಳಿಂದ  ಮಣಿಸಿತು. ಅತ್ಯಂತ ಏಕಪಕ್ಷೀಯವಾಗಿದ್ದ ಪಂದ್ಯ- ದಲ್ಲಿ ಪಂದ್ಯದ ಮೊದಲು ಹಾಗೂ ದ್ವಿತೀಯಾರ್ಧದಲ್ಲಿ ಕರ್ನಾಟಕ ಎರಡು ಗೋಲುಗಳನ್ನು ಬಾರಿಸಿ, ಜಮ್ಮು ಹಾಗೂ ಕಾಶ್ಮೀರ ತಂಡವನ್ನು ಯಶಸ್ವಿಯಾಗಿ ಸೋಲಿಸಿತು. ಪಂದ್ಯದ 32 ಹಾಗೂ 41ನೇ ನಿಮಿಷಗಳಲ್ಲಿ ಅರುಣ್ ಪಾಂಡೆ ಎರಡು ಗೋಲು ಹೊಡೆದರೆ, ಸ್ಟೀವ್ ಹ್ಯಾನ್ಸನ್ 57 ಮತ್ತು 85ನೇ ನಿಮಿಷಗಳಲ್ಲಿ ಕೂಡಾ ಎರಡು ಗೋಲು  ದಾಖಲಿಸಿದರು.

ಕರ್ನಾಟಕ ಆಟಗಾರರ ದಿಟ್ಟ ಆಟಕ್ಕೆ ಪ್ರತಿ ಹೇಳಲು ವಿಫಲವಾದ ಜಮ್ಮು ಮತ್ತು ಕಾಶ್ಮೀರ ಫೈನಲ್‍ನಿಂದ ವಂಚಿತವಾಯಿತು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಅಂತಿಮ  ಹಣಾಹಣಿಯಲ್ಲಿ ಕರ್ನಾಟಕ ಮತ್ತು ಕೇರಳ ಪ್ರಶಸ್ತಿಗಾಗಿ ಸೆಣಸಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್