ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಮೀಸಲು ತಂಡದ ತರಬೇತುದಾರರಾಗಿರುವ ಫ್ರಾನ್ಸ್ ಫುಟ್ಬಾಲ್ ದಂತಕತೆ ಜಿನೇದಿನ್ ಜಿದಾನೆ ಅವರೇ ಮುಖ್ಯ ತಂಡಕ್ಕೂ ತರಬೇತುದಾರರಾಗಿ ನೇಮಕಗೊಳ್ಳಲಿದ್ದಾರೆಂಬ ವದಂತಿಗಳು ಗುರುವಾರ ಸ್ಪೇನ್‍ನ ಮಾಧ್ಯಮಗಳಲ್ಲಿ ಹರಿದಾಡಿತು.
ಇದನ್ನು ಸ್ವತಃ ಜಿದಾನೆ ಕೂಡ ನೇರವಾಗಿ ತಳ್ಳಿಹಾಕಿಲ್ಲ. ``ಸದ್ಯಕ್ಕೆ ನಮ್ಮ ಮೀಸಲು ತಂಡವು ಮುಂದಿನ ಶನಿವಾರ ಟ್ಯಾಲಾವೆರಾ ಡಿ ಲಾ ರೇಯಾ್ನ ತಂಡವನ್ನು ಎದುರಿಸುತ್ತಿದ್ದು ಆನಂತರವಷ್ಟೇ ಉತ್ತರಿಸುತ್ತೇನೆ'' ಎಂದಿದ್ದಾರೆ.