ಮ್ಯಾಂಚೆಸ್ಟರ್: ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಶನಿವಾರ ನಡೆಯಲಿರುವ ತಮ್ಮ ಮೂರನೇ ಸುತ್ತಿನ ಬಾಕ್ಸಿಂಗ್‍ನಲ್ಲಿ ಬಲ್ಗೇರಿಯಾದ ಸಮೆಟ್ ಹ್ಯೂಸೆನೊವ್ ಅವರನ್ನು ಮೂರೇ ಸುತ್ತಿನಲ್ಲಿ ಮಣಿಸುವುದಾಗಿ ತಿಳಿಸಿದ್ದ, ಆ ಮೂಲಕ ವೃತ್ತಿಪರ ಬಾಕ್ಸಿಂಗ್‍ನಲ್ಲಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ.
ಮ್ಯಾಂಚೆಸ್ಟರ್ ಅರೆನಾದಲ್ಲಿ ಸಂಜೆ ನಡೆಯಲಿರುವ 75 ಕೆ.ಜಿ ಮಿಡಲ್ ವೇಟ್ ವಿಭಾಗದ ಸೆಣಸಾಟದಲ್ಲಿ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಲು ಹರ್ಯಾಣ ಮೂಲದ ಬಾಕ್ಸರ್ ಪಣ ತೊಟ್ಟಿದ್ದಾರೆ. ``ಉತ್ತ ಮ ಲಯದಲ್ಲಿದ್ದೇನೆ. ಬಲ್ಗೇರಿಯಾ ಬಾಕ್ಸರ್ ಸಾಕಷ್ಟು ಅನುಭವಿಯಾಗಿದ್ದರೂ, ಶನಿವಾರ ರಾತ್ರಿ ಅವರನ್ನು ಪ್ರಬಲ ಪಂಚ್‍ಗಳಿಂದ ಮಣಿಸುವ ವಿಶ್ವಾಸ ವಿದೆ'' ಎಂದು ವಿಜೇಂದರ್ ತಿಳಿಸಿದ್ದಾರೆ.