ಪಂಜಾಬ್ ಮತ್ತು ದಿಲ್ಲಿ ನಡುವಿನ ಪಂದ್ಯ 
ಕ್ರೀಡೆ

ಪ್ರೊ ರೆಸ್ಲಿಂಗ್ ಲೀಗ್: ಪಂಜಾಬ್‍ಗೆ ಜಯ

ನಿರ್ಣಾಯಕ ಹಣಾಹಣಿಯಲ್ಲಿ ಪ್ರವೀಣ್ ರಾಣಾ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಪಂಜಾಬ್ ರಾಯಲ್ಸ್ ತಂಡ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯಲ್ಲಿ ದಿಲ್ಲಿ ವೀರ್ ತಂಡವನ್ನು ಮಣಿಸಿತು...

ನವದೆಹಲಿ: ನಿರ್ಣಾಯಕ ಹಣಾಹಣಿಯಲ್ಲಿ ಪ್ರವೀಣ್ ರಾಣಾ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಪಂಜಾಬ್ ರಾಯಲ್ಸ್ ತಂಡ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯಲ್ಲಿ ದಿಲ್ಲಿ ವೀರ್ ತಂಡವನ್ನು  ಮಣಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ರಾಯಲ್ಸ್ ತಂಡ 4-3 ಅಂತರದಿಂದ ದಿಲ್ಲಿ ವೀರ್ ತಂಡವನ್ನು ಮಣಿಸಿತು. ಈ ಸೋಲಿನಿಂದ ದಿಲ್ಲಿ ವೀರ್ ತಂಡ ಸತತ ಮೂರನೇ ಬಾರಿಗೆ ಮುಖಭಂಗ  ಅನುಭವಿಸಿದ್ದು, ತೀವ್ರ ನಿರಾಸೆ ಅನುಭವಿಸಿದೆ. ಪಂದ್ಯದಲ್ಲಿ ತೀವ್ರ ಪ್ರತಿರೋಧ ನೀಡಿದ ದಿಲ್ಲಿ ವೀರ್ ತಂಡ ಒಂದು ಹಂತದಲ್ಲಿ 3-3 ಅಂತರದ ಸಮಬಲ ಸಾಧಿಸಿತ್ತು. ಆದರೆ ಅಂತಿಮ ಹಾಗೂ ನಿರ್ಣಾಯಕವಾಗಿದ್ದ ಪುರುಷರ 74 ಕೆ.ಜಿ ವಿಭಾಗದ ಸೆಣಸಿನಲ್ಲಿ ರಾಯಲ್ಸ್ ನ ಪ್ರವೀಣ್, ದಿಲ್ಲಿಯ ದಿನೇಶ್ ಕುಮಾರ್ ವಿರುದ್ಧ 6-2 ಅಂತರದಲ್ಲಿ ಜಯ ಸಾಧಿಸಿದ ಪರಿಣಾಮ ದಿಲ್ಲಿ  ಸೋಲನ್ನುಭವಿಸಬೇಕಾಯಿತು.

ಆರಂಭಿಕ ಪಂದ್ಯದಲ್ಲಿ ಮುಂಬೈ ಗರುಡಾಸ್ ವಿರುದ್ಧ ಸೋತಿದ್ದ ಪಂಜಾಬ್, ನಂತರ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಮೊದಲ ಸುತ್ತಿನ ಸೆಣಸಿನಲ್ಲಿ ಪುರುಷರ 57 ಕೆ.ಜಿ ವಿಭಾಗದ  ಕುಸ್ತಿಯಲ್ಲಿ ಪಂಜಾಬ್‍ನ ವ್ಲಾಡ್ಮಿರ್ ಖಿಂಚೆಗಶಿವಿಲಿ ತಮ್ಮ ಪ್ರತಿಸ್ಪರ್ಧಿ ಬೆಖ್ಬಯರ್ ಎರ್ಡನ್ ಬಟ್ ವಿರುದ್ಧ 4-3 ಅಂತರದ ಮುನ್ನಡೆ ಸಾಧಿಸಿದರು. ನಂತರ ಮಹಿಳೆಯರ 69 ಕೆ.ಜಿ ವಿಭಾಗದ  ಪಂದ್ಯದಲ್ಲಿ ಪಂಜಾಬ್‍ನ ವಾಸಿಲಿಸಾ ಮರ್ಜಲಿಕ್ ತಾಂತ್ರಿಕ ಮುನ್ನಡೆಯೊಂದಿಗೆ 2-0 ಯಿಂದ ನಿಕ್ಕಿ ಅವರನ್ನು ಮಣಿಸಿದರು. ಪುರುಷರ 65 ಕೆ.ಜಿ ವಿಭಾಗದಲ್ಲಿ ಪಂಜಾಬ್‍ನ ರಾಜೇಶ್ ಅವರನ್ನು  ತಾಂತ್ರಿಕ ಮುನ್ನಡೆಯೊಂದಿಗೆ ಮಣಿಸಿದ ದಿಲ್ಲಿಯ ನವ್ರುಜೊವ್ ಇಕ್ತಿಯಾರ್ ದಿಲ್ಲಿಗೆ ಆಸರೆಯಾದರು.

ನಂತರ ಮಹಿಳೆಯರ 58 ಕೆ.ಜಿ ವಿಭಾಗದಲ್ಲಿ ಯೆಸಿಲಿರ್ಮಕ್ ಎಲಿಫ್ ಪಂಜಾಬ್‍ನ ಗೀತಾ ಫೊಗತ್ ಅವರನ್ನು ಮಣಿಸಿ ತಂಡ 2-2ರ ಸಮಬಲ ಸಾಧಿಸುವಂತೆ ಮಾಡಿದರು. ಪುರುಷರ 125  ಕೆ.ಜಿ ವಿಭಾಗದಲ್ಲಿ ಪಂಜಾಬ್ ಪರ ಮಂಗೋಲಿಯಾದ ಜರ್ಗಲ್‍ಸೈಖಾನ್ ಚುಲುಂಬಟ್, ತಮ್ಮ ಪ್ರತಿಸ್ಪರ್ಧಿ ಕೃಷ್ಣ ಕುಮಾರ್ ಅವರನ್ನು 4-0ಯಿಂದ ಮಣಿಸಿ ಮೇಲುಗೈ ಸಾಧಿಸಿದರು. ಬಳಿಕ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ದಿಲ್ಲಿಯ ವಿನೇಶ್ ಫೊಗತ್ ತಮ್ಮ ಪ್ರತಿಸ್ಪರ್ಧಿ ಯಾಣಾ ರಟ್ಟಿಗನ್ ಅವರನ್ನು 15-6 ಅಂತರದಲ್ಲಿ ಮಣಿಸಿದ್ದು ಮತ್ತೊಮ್ಮೆ ಸಮಬಲಕ್ಕೆ ಕಾರಣವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

Asian Games 2026: ಪಾಕಿಸ್ತಾನ ಬಗ್ಗು ಬಡಿದ ಭಾರತಕ್ಕೆ ಮತ್ತೊಂದು ಚಿನ್ನ: ಗೋಲ್ಡ್ ಗೆದ್ದ ಕುಸ್ತಿಪಟು ಅಮನ್!

ನೋಯ್ಡಾದ 'ಸೂಪರ್ನೋವಾ' ಕಟ್ಟಡದ 43ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ; ದೇಹ ಛಿದ್ರ ಛಿದ್ರ! ಭಯಾನಕ Video

Asian Games 2026: 'ನೀನ್ ಕ್ಯಾಚ್ ಬಿಡು, ನಾವ್ ನೀರು ಬಿಡ್ತೀವಿ': ಫೀಲ್ಡಿಂಗ್ ಮಾಡುತ್ತಿದ್ದ ಪಾಕ್ ಬೌಲರ್ ಗೆ ಅಭಿಮಾನಿಗಳ ಕಾಟ! Video

ಕರ್ನಾಟಕದಲ್ಲಿ ತೀವ್ರ ಬರ: ತುರ್ತು ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ; ಅಮಿತ್ ಶಾಗೆ ಪತ್ರ!