ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ನಿನ್ನೆ ಹಬ್ಬಿತ್ತು.
ಆದರೆ ತಾನು ಮೂರನೇ ಮದುವೆಯಾಗುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ಮಾಧ್ಯಮದವರು ಸುದ್ದಿ ಪ್ರಕಟಿಸುವ ಮುನ್ನ ನಿಜವಾದ ವಿಷಯ ತಿಳಿದುಕೊಳ್ಳಿ ಎಂದು ಅಜರುದ್ದೀನ್ ಸೋಮವಾರ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಮೂಲದ ಗೆಳತಿ ಶಾನೆನ್ ಮೇರಿ ಅವರನ್ನು ಅಜರುದ್ದೀನ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಭಾನುವಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.