ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಿಕಿಯಾಸ್, ಮೇಸ್‍ಗೇಬು ಗೆಲವು

ಸ್ವಯಂ ಕೇವಾ ಸಂಸ್ಥೆಗಳ ಧನ ಸಹಾಯ ಹೆಚ್ಚಿಸುವ ನಿಟ್ಟಿನಲ್ಲಿ ಯೆಲ್ಲೊ ಅಂಡ್ ರೆಡ್ಡ್ ಸರ್ವೀಸ್ ಪ್ರೈ. ಲಿಮಿಟೆಡ್, ಇಂಡಿಯಾ ಕೇರ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಮ್ಯಾರಥಾನ್‍ನಲ್ಲಿ ಇಥಿಯೋಪಿಯಾದ ಮಿಕಿಯಾಸ್ ಯೇಮತಾ ಹಾಗೂ ಮೆಸ್‍ಗೇಬು ಅಲ್‍ಮು...

ಮಿಕಿಯಾಸ್, ಮೇಸ್‍ಗೇಬು ಗೆಲವು
Manjula VN
Updated On : 21 Dec 2015, 1:18 am

ಮೈಸೂರು: ಸ್ವಯಂ ಕೇವಾ ಸಂಸ್ಥೆಗಳ ಧನ ಸಹಾಯ ಹೆಚ್ಚಿಸುವ ನಿಟ್ಟಿನಲ್ಲಿ ಯೆಲ್ಲೊ ಅಂಡ್ ರೆಡ್ಡ್ ಸರ್ವೀಸ್ ಪ್ರೈ. ಲಿಮಿಟೆಡ್, ಇಂಡಿಯಾ ಕೇರ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಭಾನುವಾರ  ಆಯೋಜಿಸಿದ್ದ ಮೈಸೂರು ಮ್ಯಾರಥಾನ್‍ನಲ್ಲಿ ಇಥಿಯೋಪಿಯಾದ ಮಿಕಿಯಾಸ್ ಯೇಮತಾ ಹಾಗೂ ಮೆಸ್‍ಗೇಬು ಅಲ್‍ಮು ಕ್ರಮವಾಗಿ 21 ಕಿ.ಮೀ ಹಾಗೂ 10 ಕಿ.ಮೀ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.

ಇನ್ನು, 21 ಕಿ.ಮೀ. ಮಹಿಳೆಯರ ವಿಭಾಗದಲ್ಲಿ ಕಿರ್‍ಜತ್ ಕೌರ್ ಹಾಗೂ 10 ಕಿ.ಮೀ. ವಿಭಾಗದಲ್ಲಿ ಉಷಾ ಹೆಗಡೆ ಮೊದಲಿಗರಾಗಿ ಹೊರಹೊಮ್ಮಿದರು. ನಗರದ ಮಾನಸಗಂಗೋತ್ರಿಯಲ್ಲಿರುವ ಎಸ್  ಜೆಸಿಇ ಆವರಣದಿಂದ ಆರಂಭವಾದ ಈ ಮ್ಯಾರಥಾನ್ ನಲ್ಲಿ ವಿಜಯ ವಿಠ್ಠಲ ವಿದ್ಯಾಸಂಸ್ಥೆ, ಎಸ್‍ಪಿಐ, ಇನ್ಫೋಸಿಸ್, ವನವಾಸಿ ಟ್ರಸ್ಟ್, ಎನ್‍ಸಿಸಿ, ಎನ್‍ಎಸ್ ಎಸ್ ಕಾರ್ಯಕರ್ತರು, ವಿದೇಶಿ ಓಟಗಾರರು ಕೇರಿದಂತೆ 1500 ಸ್ಪರ್ಧಿಗಳು ಪಾಲ್ಗೊಂಡ್ದಿದರು. ಈ ಮ್ಯಾರಥಾನ್‍ನಲ್ಲಿ 21 ಕಿ.ಮೀ. ಓಟಕ್ಕೆ ರಾಯಲ್ ರನ್, 10 ಕಿ.ಮೀ. ಹೆರಿಟೇಜ್ ರನ್, 5 ಕಿ.ಮೀ. ಗುಡ್‍ವಿಲ್, ಹಿರಿಯ ನಾಗರಿಕರ ಹಾಗೂ ವಿದ್ಯಾರ್ಥಿಗಳ ರನ್ ಎಂಬ 5 ವಿಭಾಗಗಳಾಗಿ ವಿಂಗಡಿಸಲಾಗಿತ್ತು. 21 ಕಿ.ಮೀ ಮ್ಯಾರಥಾನ್ ಎಸ್ ಜೆಸಿಇ ಆವರಣದಿಂದ ಆರಂಭವಾಗಿ ಮಾನಸಗಂಗೋತ್ರಿ ಕ್ಯಾಂಪಸ್, ಕುಕ್ಕರಹಳ್ಳಿ ಕೆರೆ, ಜೆಎಲ್‍ಬಿ ರಸ್ತೆ, ಅಗ್ರಹಾರ ವೃತ್ತ, ಮಾಲ್ ಆಫ್  ಮೈಸೂರು, ರೆಸ್ ಕೋರ್ಸ್ ರಸ್ತೆ, ಚಾಮುಂಡಿ ಬೆಟ್ಟದ ತಪ್ಪಲಿಗೆ ತಲುಪಿತು.

ಮತ್ತೆ ಅದೇ ಮಾರ್ಗವಾಗಿ ಎಸ್‍ಜೆಸಿಇ ಆವರಣದಲ್ಲಿ ಅಂತ್ಯವಾಯಿತು. 10 ಕಿ.ಮೀ ಓಟವು ಎಂಜಿ ರಸ್ತೆ ಹಾಗೂ 5 ಕಿ.ಮೀ ಓಟವು ಕುಕ್ಕರಹಳ್ಳಿ ಕೆರೆಯಿಂದ ಮತ್ತೆ ಎಸ್‍ಜೆಸಿಇ ಆವರಣದಲ್ಲಿ
ಕೊನೆಗೊಂಡಿತು. ಮ್ಯಾರಥಾನ್ ಉಸ್ತುವಾರಿಯನ್ನು ಏಕಲವ್ಯ ಪ್ರಶಸ್ತಿ ವಿಜೇತ ನವೀನ್ ಅಚಾರ್ಯವಹಿಸಿದ್ದರು.

ಮೈಸೂರು ಮ್ಯಾರಥಾನ್ ವಿಜೇತರ ಪಟ್ಟಿ
- 21 ಕಿ.ಮೀ ಪುರುಷ ವಿಭಾಗದಲ್ಲಿ ಮಿಕಿಯಾಸ್ ಯೇಮತಾ ಇಥಿಯೋ ಪಿಯಾ (ಪ್ರಥಮ), ಪ್ರವೀಶ್  (ದ್ವಿತಿಯ), ಇರ್‍ಮಿಯಾ ಯೆಮತಾ ಈಥೋಪಿಯ ತೃತೀಯ).
- 21 ಕಿ.ಮೀ. ಮಹಿಳೆಯರ ವಿಭಾಗಕಿರ್‍ಜತ್ ಕೌರ್ (ಪ್ರಥಮ), ತಿಪ್ಪವ ಸಣ್ಣಕ್ಕಿ (ದ್ವಿತೀಯ), ಗೌರಿ ಸುಂದರಂ (ತೃತೀಯ).
- 10 ಕಿ.ಮೀ ಪುರುಷ ವಿಭಾಗದಲ್ಲಿ ಮೆಸ್ ಗೇಬು ಅಲ್‍ಮು ಇಥಿಯೋಪಿಯಾ (ಪ್ರಥಮ), ಉಮೇಶ್ ಕುಮಾರ್(ದ್ವಿತೀಯ).
- 10 ಕಿ.ಮೀ. ಮಹಿಳೆಯರ ವಿಭಾಗಉಷಾ ಹೆಗಡೆ (ಪ್ರಥಮ), ಡಾ. ವಿನುತಾ ಮಂಜುನಾಥ್ (ದ್ವಿತೀಯ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement