ಐಪಿಟಿಎಲ್: ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಎಡವಿದ ಕಳೆದ ಬಾರಿ ವಿಜೇತ ಇಂಡಿಯನ್ ಏಸಸ್ 
ಕ್ರೀಡೆ

ಸ್ಲಾಮರ್ಸ್ ಮುಡಿಗೆ ಚಾಂಪಿಯನ್ ಪಟ್ಟ

ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಹಾಲಿ ಚಾಂಪಿಯನ್ ಇಂಡಿಯನ್ ಏಸಸ್ ತಂಡ ಎರಡನೇ ಆವೃತ್ತಿಯ ಇಂಟರ್‍ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ ಟೂರ್ನಿಯ ಅಂತಿಮ ಹಂತದಲ್ಲಿ ಎಡವಿದ ಪರಿಣಾಮ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ...

ಸಿಂಗಾಪುರ: ಟೂರ್ನಿಯ ಆರಂಭದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಹಾಲಿ ಚಾಂಪಿಯನ್ ಇಂಡಿಯನ್ ಏಸಸ್ ತಂಡ ಎರಡನೇ ಆವೃತ್ತಿಯ ಇಂಟರ್‍ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ ಟೂರ್ನಿಯ ಅಂತಿಮ ಹಂತದಲ್ಲಿ ಎಡವಿದ ಪರಿಣಾಮ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಂಡಿಯನ್ ಏಸಸ್ ತಂಡ ಆತಿಥೇಯ ಸಿಂಗಾಪುರ ಸ್ಲಾಮರ್ಸ್ ವಿರುದ್ಧ 2126 ಅಂಕಗಳ ಅಂತರದಲ್ಲಿ ಪರಾಭವಗೊಳ್ಳುವ ಮೂಲಕ  ಸೋಲನುಭವಿಸಿತು. ಈ ಗೆಲವಿನೊಂದಿಗೆ ಸಿಂಗಾಪುರ ಸ್ಲಾಮರ್ಸ್ ತಂಡ ಐಪಿಟಿಎಲ್ ನ ಹೊಸ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಇಂಡಿಯನ್ ಏಸಸ್ ತಂಡ ಟೂರ್ನಿಯ ಲೀಗ್  ಹಂತದಲ್ಲಿ ಆಡಿದ 11 ಪಂದ್ಯಗಳ ಪೈಕಿ 8ರಲ್ಲಿ ಜಯ ಹಾಗೂ ಕೇವಲ 3ರಲ್ಲಿ ಸೋಲನುಭವಿಸಿತ್ತು. ಇನ್ನು ಶನಿವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲೂ ಸಿಂಗಾಪುರ ಸ್ಲಾಮರ್ಸ್ ತಂಡದ ವಿರುದ್ಧ ಇಂಡಿಯನ್ ಏಸಸ್ 2127 ಅಂಕಗಳ ಅಂತರದಲ್ಲಿ ಮುಖಭಂಗ ಅನುಭವಿಸಿತ್ತು.

ಪಂದ್ಯದಲ್ಲಿ ನಡೆದ ಐದು ಗೇಮ್ಗಳಲ್ಲಿ ಇಂಡಿಯನ್ ಏಸಸ್ ಅಂತಿಮ ಎರಡು ಗೇಮ್ಗಳನ್ನು ಗೆಲ್ಲಲಷ್ಟೇ ಶಕ್ತವಾಯಿತು. ಆರಂಭಿಕ 3 ಗೇಮ್ಗಳಲ್ಲಿ ಅರ್ಹ ಮುನ್ನಡೆ ಪಡೆದಿದ್ದ ಸಿಂಗಾಪುರ ಸ್ಲಾಮರ್ಸ್  ತಂಡ ಪಂದ್ಯದ ಮೇಲೆ ಸಂಪೂರ್ಣ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಯಿತು. ಪಂದ್ಯದ ಪುರುಷರ ಲೆಜೆಂಡ್ಸ್ ಸಿಂಗಲ್ಸ್‍ನಲ್ಲಿ ಸ್ಲಾಮಸ್ರ್ ನ ಕಾರ್ಲೊಸ್ ಮೊಯಾ 62ರ ಅಂತರದಿಂದ  ಏಸಸ್‍ನ ಫ್ಯಾಬ್ರಿಸ್ ಸ್ಯಾಂಟೊರೊ ವಿರುದ್ಧ ಭರ್ಜರಿ ಮುನ್ನಡೆ ಪಡೆದುಕೊಂಡರು. ನಂತರ ಪುರುಷರ ಸಿಂಗಲ್ಸ್‍ನಲ್ಲಿ ಸ್ಲಾಮರ್ಸ್ ಪರ ಸ್ಟಾನಿಸ್ಲಾಸ್ ವಾವ್ರಿಂಕಾ 65 (74)ರಿಂದ ಏಸಸ್‍ನ  ಬೆರ್ನಾರ್ಡ್ ಟಾಮಿಕ್ ವಿರುದ್ಧ ರೋಚಕ ಜಯ ಸಾಧಿಸಿದರು.

ಇನ್ನು ಮಹಿಳೆಯರ ಸಿಂಗಲ್ಸ್‍ನಲ್ಲಿ ಸ್ಲಾಮರ್ಸ್‍ನ ಬೆಲಿಂಡಾ ಬೆನ್ಸಿಕ್, ಏಸಸ್‍ನ ಸ್ವೆಟ್ಲಾನಾ ಕುಜ್ನೆಟ್ಸೊವಾ ವಿರುದ್ಧ 62ರ ಭರ್ಜರಿ ಮುನ್ನಡೆ ಸಾಧಿಸಿದರು. ಆ ಮೂಲಕ ಆರಂಭಿಕ ಮೂರು  ಗೇಮ್ಗಳಲ್ಲಿ ಸ್ಲಾಮರ್ಸ್ ತಂಡ ಬರೊಬ್ಬರಿ 9 ಅಂಕಗಳ ಮುನ್ನಡೆಯೊಂದಿಗೆ ಏಸಸ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಅಂತಿಮ ಎರಡು ಸೆಣಸಿನಲ್ಲಿ ಇಂಡಿಯನ್ ಏಸಸ್‍ನ ಜೋಡಿಗಳು ಜಯ  ಸಾಧಿಸಿದರೂ ಪಂದ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಿಶ್ರ ಡಬಲ್ಸ್‍ನಲ್ಲಿ ಏಸಸ್‍ನ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿಯು 64 ಅಂತರದಲ್ಲಿ ಸ್ಲಾಮರ್ಸ್‍ನ  ಬ್ರೌನ್ ಮತ್ತು ಪ್ಲಿಸ್ಕೊವಾ ಜೋಡಿಯನ್ನು ಮಣಿಸಿತು. ಪುರುಷರ ಡಬಲ್ಸ್‍ನಲ್ಲಿ ಸ್ಲಾಮರ್ಸ್‍ನ ಮೆಲೊ ಮತ್ತು ಕಿರ್ಗಿಯೋಸ್ ಜೋಡಿಯನ್ನು ಏಸಸ್‍ನ ರೋಹನ್ ಬೋಪಣ್ಣ ಮತ್ತು ಡೊಡಿಗ್  ಜೋಡಿಯು 65 ಅಂತರದಲ್ಲಿ ಮಣಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT