ಜೈಪುರ: ಭಾರತೀಯ ರೈಫಲ್ಸ್ ಸಂಸ್ಥೆ (ಎನ್‍ಆರ್‍ಎಐ)ಯ ಕಾರ್ಯದರ್ಶಿಯೂ ಆಗಿರುವ ಶೂಟರ್ ಡೇರಿಯಸ್ ಚಿನಾಯ್, 59ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಪುರುಷರ ವಿಭಾಗದ ಟ್ರಾಪ್ ಶೂಟಿಂಗ್‍ನ ಫೈನಲ್‍ನಲ್ಲಿ ತೆಲಂಗಾಣ ಪರ ಕಣಕ್ಕಿಳಿದಿದ್ದ ಚಿನಾಯ್ ಮೊದಲಿಗರಾಗಿ ಹೊರಹೊಮ್ಮಿದರೆ, ಎನ್‍ಆರ್‍ಎಐನ ಅಧ್ಯಕ್ಷ ರಾಣಿಂದರ್ ಸಿಂಗ್ ಹಾಗೂ ವಿಶ್ವದ ಮಾಜಿ ಟ್ರಾಪ್ ಚಾಂಪಿಯನ್ ಮಾನವ್ಜೀತ್ ಸಿಂಗ್ ಸಂಧು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಗೌರವಕ್ಕೆ ಭಾಜನರಾದರು. ತಂಡಗಳ ವಿಭಾಗದ ಪುರುಷರ ಟ್ರಾಪ್ ವಿಭಾಗದಲ್ಲಿ ಮಾನವ್ಜೀತ್, ಮಾನ್ಶರ್ ಸಿಂಗ್, ವಿಶ್ವದೇವ್ ಸಿಂಗ್ ಸಿಂಧು ಅವರುಳ್ಳ ಪಂಜಾಬ್ ತಂಡ ಚಿನ್ನ ಗೆದ್ದರೆ, ಡೇರಿಯಸ್ ಇದ್ದ ತೆಲಂಗಾಣ ದ್ವಿತೀಯ ಹಾಗೂ ಉತ್ತರ ಪ್ರದೇಶ ತಂಡ ತೃತೀಯ ಸ್ಥಾನ ಗಳಿಸಿತು.