ಕೊಲಂಬೊ: ಸಂಘಟಿತ ಬೌಲಿಂಗ್ ದಾಳಿಯಲ್ಲದೆ ಆರಂಭಿಕ ವಾಷಿಂಗ್ಟನ್ ಸುಂದರ್ (56: 77 ಎಸೆತ, 6 ಬೌಂಡರಿ) ದಾಖಲಿಸಿದ ಅರ್ಧಶತಕದ ನೆರವಿನೊಂದಿಗೆ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಹತ್ತೊಂಭತ್ತು ವರ್ಷದೊಳಗಿನವರ ತ್ರಿಕೋನ ಏಕದಿನ ಸರಣಿ ಪಂದ್ಯಾವಳಿಯಲ್ಲಿ ಭಾರತದ ಯುವ ತಂಡ ಚಾಂಪಿಯನ್ ಎನಿಸಿಕೊಂಡಿತು.
ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಗೆಲ್ಲಲು 159 ರನ್‍ಗಳಂಥ ಸಾಮಾನ್ಯ ಗುರಿ ಪಡೆದ ಈಶನ್ ಕಿಶನ್ ಸಾರಥ್ಯದ ಭಾರತದ ಕಿರಿಯರ ತಂಡ, 33.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು. ಅಂದಹಾಗೆ ಟೂರ್ನಿಯಾದ್ಯಂತ ಅಜೇಯ ಓಟವನ್ನು ಕಾಯ್ದುಕೊಂಡದ್ದು ಭಾರತ ತಂಡದ ಪ್ರಮುಖ ಸಾಧನೆ ಎನಿಸಿಕೊಂಡಿತು. ಅಂತೆಯೇ ಪಂದ್ಯಾವಳಿಯಲ್ಲಿ ಮೂರನೇ ತಂಡವಾಗಿದ್ದ ಇಂಗ್ಲೆಂಡ್ ಯಾವುದೇ ಗೆಲುವು ದಾಖಲಿಸಲಿಲ್ಲ ಎಂಬುದೂ ಇಲ್ಲಿ ಗಮನಾರ್ಹ. ಆರ್.ಆರ್. ಪಂತ್ ಜತೆಗೆ ಮೊದಲ ವಿಕೆಟ್‍ಗೆ 89 ರನ್ ಕಲೆಹಾಕುವ ಮೂಲಕ ವಾಷಿಂಗ್ಟನ್ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಪಂತ್ 35 ರನ್ ಗಳಿಸಿ ಔಟಾದ ಬಳಿಕ ರಿಕಿ ಭುಯಿ 29 ರನ್ ಗಳಿಸಿದರು. ಆ ಬಳಿಕ ವಿಕೆಟ್ ಕಳೆದುಕೊಂಡರೂ,
ಭಾರತದ ಗೆಲುವಿಗೆ ಅದೇನೂ ಬಾಧಕವೆನಿಸಲಿಲ್ಲ. ಆತಿಥೇಯ ತಂಡದ ಪರ ಎಡಗೈ ಸ್ಪಿನ್ನರ್ ದಮಿತಾ ಸಿಲ್ವಾ ಮೂರು ವಿಕೆಟ್ ಪಡೆದು ಗಮನ ಸೆಳೆದರು. ಆದಾಗ್ಯೂ ಲಂಕಾದ ಬ್ಯಾಟಿಂಗ್ ಬೆನ್ನೆಲುಬು ಮುರಿದು 3 ವಿಕೆಟ್ ಪಡೆದ ಕೆ.ಕೆ. ಅಹಮದ್ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು.
ಡಿಸಿಲ್ವಾ ಆಸರೆ: ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗಿಳಿದ ಶ್ರೀಲಂಕಾ ತಂಡಕ್ಕೆ ಪ್ರವಾಸಿ ಭಾರತದ ಬೌಲರ್‍ಗಳು ಮಾರಕರಾಗಿ ಪರಿಣಮಿಸಿದರು. ಭಾರತ ತಂಡದ ಪರಿಣಾಮಕಾರಿ ದಾಳಿ ಮಧ್ಯೆಯೂ ಮಧ್ಯಮ ಕ್ರಮಾಂಕಿತ ಆಟಗಾರ ಹಾಗೂ ವಿಕೆಟ್‍ಕೀಪರ್ ವಿಶಾದ್ ರಂದಿಕಾ ಡಿಸಿಲ್ವಾ (58: 75 ಎಸೆತ, 7 ಬೌಂಡರಿ) ದಾಖಲಿಸಿದ ಅರ್ಧಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ, 47.2 ಓವರ್‍ಗಳಲ್ಲಿ 158ಕ್ಕೆ ಆಲೌಟ್ ಆಯಿತು.
ಆರಂಭದಲ್ಲೇ ಕುಸಿತ: ಶ್ರೀಲಂಕಾದ ಇನ್ನಿಂಗ್ಸ್ ಏನೂ ಹೇಳಿಕೊಳ್ಳುವಂತಿರಲಿಲ್ಲ. ಕೇವಲ 19 ರನ್ ಗಳಿಸಿದ್ದಾಗಲೇ ವೇಗಿ ಆವೇಶ್ ಖಾನ್ ಲಂಕಾಗೆ ಮೊದಲ ಹೊಡೆತ ನೀಡಿದರು. ಆವಿಷ್ಕಾ ಫರ್ನಾಂಡೊ (7) ಅಲ್ಲದೆ, ಮತ್ತೋರ್ವ ಆರಂಭಿಕ ಬಂಡಾರ (12) ಅವರನ್ನು ತ್ವರಿತಗತಿಯಲ್ಲಿ ಕ್ರೀಸ್ ತೊರೆಯುವಂತೆ ಮಾಡಿದ್ದು, ಆರಂಭದಲ್ಲೇ ಲಂಕಾ ಕುಸಿಯಲು ಕಾರಣವಾಯಿತು.ಒಂದು ಹಂತದಲ್ಲಿ 23 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಅತ್ಯಲ್ಪ ಮೊತ್ತಕ್ಕೆ ಕುಸಿಯುವ ಸಾಧ್ಯತೆಯೂ ಇತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಿಶಾದ್ ಡಿಸಿಲ್ವಾ ತೋರಿದ ದಿಟ್ಟ ಪ್ರತಿರೋಧದಿಂದಾಗಿ ಶ್ರೀಲಂಕಾ 150 ರನ್‍ಗಳ ಗಡಿ ಮುಟ್ಟಲು ಸಾಧ್ಯವಾಯಿತು. ಭಾರತದ ಪರ ವೇಗಿಗಳಾದ ಆವೇಶ್ ಖಾನ್ ಮತ್ತು ಮುಕುಲ್ ದಾಗರ್ ತಲಾ ಎರಡು ವಿಕೆಟ್ ಪಡೆದರೆ, ಕೆ.ಕೆ. ಅಹಮದ್ 3 ವಿಕೆಟ್ ಗಳಿಸಿದರು.
ಸ್ಕೋರ್ ವಿವರ
ಶ್ರೀಲಂಕಾ: 47.2 ಓವರ್‍ಗಳಲ್ಲಿ 158
ಕವೀನ್ ಬಂಡಾರ ಸಿ ರಿಶಭ್ ಬಿ ಆವೇಶ್ 12
ಆವಿಷ್ಕಾ ಫರ್ನಾಂಡೊ ಸಿ ಭುಯಿ ಬಿ ಆವೇಶ್ 07
ಚಾರಿತ್ ಅಸಲಂಕಾ ಸಿ ಸರ್ಫರಾಜ್ ಬಿ ಖಲೀಲ್ 00
ಕಮಿಂದು ಮೆಂಡಿಸ್ ಸಿ ಖಲೀಲ್ ಬಿ ಶುಭಂ ಮವಿ 18
ಶಮ್ಮು ಅಶನ್ ಸಿ ಇಶಾನ್ ಬಿ ಖಲೀಲ್ 01
ವಾನಿದು ಹಸರಂಗ ಬಿ ಮಯಾಂಕ್ ದಾಗರ್ 11
ವಿಶಾದ್ ರಾಂಧಿಕಾ ಸಿ ಖಲೀಲ್ ಬಿ ಶುಭಂ ಮವಿ 58
ಜೀಹನ್ ಡೇನಿಯಲ್ ಸಿ/ಬಿ ಮಯಾಂಕ್ ದಾಗರ್ 06
ದಮಿತಾ ಸಿಲ್ವಾ ಸಿ ಇಶಾನ್ ಕಿಶನ್ ಬಿ ಖಲೀಲ್ 23
ಲಹಿರು ಕುಮಾರ ರನೌಟ್ (ಸರ್ಫರಾಜ್/ರಿಶಭ್) 11
ಆಸಿತ ಫರ್ನಾಂಡೊ ಅಜೇಯ 04
ಇತರೆ: (ವೈಡ್-5, ನೋಬಾಲ್-2) 07
ವಿಕೆಟ್‍ಪತನ: 1-19 (ಆವಿಷ್ಕಾ), 2-20 (ಚರಿತ್), 3-22 (ಕವೀನ್), 4-23 (ಶಮ್ಮು), 5-46 (ಕಮಿಂದು), 6-56 (ವಾನಿದು), 7-81 (ಜೀಹನ್), 8-142 (ವಿಶಾದ್), 9-142 (ದಮಿತಾ), 10-158 (ಲಹಿರು)
ಬೌಲಿಂಗ್ ವಿವರ: ಆವೇಶ್ ಖಾನ್ 9-3-24-2, ಖಲೀಲ್
ಅಹಮದ್ 9-2-29-3, ಶುಭಂ ಮವಿ 7.2-0-28-2,
ವಾಷಿಂಗ್ಟನ್ ಸುಂದರ್ 2-0-9-0, ಮಯಾಂಕ್ ದಾಗರ್
10-2-24-2, ಮಹಿಪಾಲ್ ಲಾಮ್ರರ್ 7-1-23-0,
ಅನ್ಮೋಲ್‍ಪ್ರೀತ್ ಸಿಂಗ್ 2-0-13-0, ಸರ್ಫರಾಜ್ ಖಾನ್ 1-0-8-0
ಭಾರತ: 33.5 ಓವರ್‍ಗಳಲ್ಲಿ 5
ವಿಕೆಟ್‍ಗೆ 159
ವಾಷಿಂಗ್ಟನ್ ಸುಂದರ್ ಸಿ ವಾನಿದು ಬಿ ದಮಿತಾ ಸಿಲ್ವಾ 56
ರಿಶಭ್ ಪಂತ್ ಸಿ ಆವಿಷ್ಕಾ ಬಿ ಚರಿತ್ ಅಸಲಂಕಾ 35
ರಿಕಿ ಭುಯಿ ಅಜೇಯ 29
ಸರ್ಫರಾಜ್ ಖಾನ್ ಸಿ ಲಹಿರು ಬಿ ದಮಿತಾ ಸಿಲ್ವಾ 14
ಈಶನ್ ಕಿಶನ್ ಬಿ ದಮಿತಾ ಸಿಲ್ವಾ 12
ಅನ್ಮೋಲ್‍ಪ್ರೀತ್ ಸಿಂಗ್ ಸಿ/ಬಿ ವಾನಿಡು ಹಸರಂಗ 00
ಮಹಿಪಾಲ್ ಲಾಮ್ರರ್ ಅಜೇಯ 01
ಇತರೆ: (ಬೈ-1, ಲೆಬೈ-2, ವೈಡ್-7, ನೋಬಾಲ್-2) 12
ವಿಕೆಟ್‍ಪತನ: 1-89 (ರಿಶಭ್), 2-111 (ಸುಂದರ್), 3-136
(ಸರ್ಫರಾಜ್), 4-154 (ಇಶನ್), 5-155 (ಅನ್ಮೋಲ್)
ಬೌಲಿಂಗ್ ವಿವರ: ಅಸಿತ ಫರ್ನಾಂಡೊ 4-0-21-0, ಲಹಿರು
ಕುಮಾರ 6-0-29-0, ಜೀಹನ್ ಡೇನಿಯಲ್ 4-0-22-0,
ಚರಿತ್ ಅಸಲಂಕಾ 5-0-30-1, ಶಮ್ಮು ಅಶನ್ 1-0-6-0,
ದಮಿತಾ ಸಿಲ್ವಾ 7-0-18-3, ಕಮಿಂದು ಮೆಂಡಿಸ್ 5-0-26-0,
ವಾನಿಡು ಹಸರಂಗ 1.5-0-4-1
ಫಲಿತಾಂಶ: ಭಾರತಕ್ಕೆ 6 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ: ಕೆ.ಕೆ. ಅಹಮದ್