ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆದಿದ್ದ ನಾಗ್ಪುರ ಪಿಚ್ (ಜಮಾತ ಪಿಚ್) ಬಗ್ಗೆ ಪಂದ್ಯದ ರೆಫರಿ ಜೆಫ್ ಕ್ರೊವ್ ನೀಡಿದ್ದ ಆಕ್ಷೇಪದ ವರದಿಯನ್ನು ಎತ್ತಿಹಿಡಿದಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ), ಪಿಚ್ ಗುಣಮಟ್ಟದ ಬಗ್ಗೆ ಎಚ್ಚರಿಕೆಯ ನೋಟಿಸ್ ನೀಡಿದೆ.
ಏತನ್ಮಧ್ಯೆ, ಪಿಚ್‍ನ ಏಕಪಕ್ಷೀಯ ಗುಣದ ಬಗ್ಗೆ ತನಗೆ ವರದಿ ನೀಡಿದ್ದ ಕ್ರೊವ್ ನಡೆಯನ್ನು ಬಿಸಿಸಿಐ ಆಕ್ಷೇಪಿಸಿತ್ತು. ಈಗ, ಐಸಿಸಿಯ ಅಧಿಕೃತ ಎಚ್ಚರಿಕೆ ನಂತರವೂ ಬಿಸಿಸಿಐ ಬುಸುಗುಟ್ಟಿದೆ. ಐಸಿಸಿಯ ಈ ನಡೆ ಸರ್ವಾಧಿಕಾರಿ ಕ್ರಮವೆಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು ಆದರೂ, ಐಸಿಸಿಯ ಎಚ್ಚರಿಕೆಗೆ ತಲೆಬಾಗುತ್ತೇವೆ ಎಂದೂ ತಿಳಿಸಿದ್ದಾರೆ.